(ನ್ಯೂಸ್ ಕಡಬ) newskadaba.com ಬೆಂಗಳೂರು, ನ.4. ಕೇಂದ್ರ ಸರ್ಕಾರ ದೇಶದಲ್ಲಿ ಜಿಎಸ್ ಟಿ ಜಾರಿಗೆ ತಂದ ಮೇಲೆ ಉದ್ಯಮ, ವ್ಯಾಪಾರ, ವಹಿವಾಟಿನ ಮೇಲೆ ಮಹತ್ವದ ಬದಲಾವಣೆಗಳು ನಡೆದಿವೆ. ಆದ್ರೆ ಜಿಎಸ್ ಟಿಯ ಬಿಸಿ ಈಗ ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ಜಿಎಸ್ ಟಿಯಿಂದ ಸಾರಿಗೆ ಸಂಸ್ಥೆ ಸಂಕಷ್ಟಕ್ಕೀಡಾಗಿದೆ.
GST ಜಾರಿಗೆ ಬಂದ ನಂತರ ಕೆಎಸ್’ಆರ್ಟಿಸಿಗೆ ಬಿಸಿ ತಟ್ಟಿದೆ. ಈಗಾಗಲೆ ಗುಜರಿಗೆ ಸೇರಿರುವ 800 ಬಸ್’ಗಳ ಖರೀದಿಗೆ ಗುಜರಿಯವರು ಮುಂದೆ ಬರುತ್ತಿಲ್ಲ. ಕಾರಣವೇನು ಅಂತಿರಾ..? ಹೌದು ಗುಜರಿ ವಸ್ತುಗಳ ಖರೀದಿ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿಯ ಗುಜರಿ ಬಸ್‌ಗಳನ್ನು ಡಿಪೊಗಳಲ್ಲಿಯೇ ನಿಲ್ಲಿಸಲಾಗಿದೆ. ಇದರಿಂದಾಗಿ ಬಸ್’ಗಳ ರಿಪೇರಿ ಮಾಡಲು, ಬಸ್’ಗಳ ನಿರ್ವಹಣೆ ಮಾಡಲು ಡಿಪೋಗಳಲ್ಲಿ ಜಾಗ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಗುಜರಿ ವಸ್ತುಗಳು ಡಿಪೋದಲ್ಲಿ ಹೆಚ್ಚಾಗಿರುವುದು ಅಗ್ನಿ ಅವಘಡ ಹೆಚ್ಚಾಗಲು ಕಾರಣವಾಗಿದೆ. ಸದ್ಯಕ್ಕೆ ಅಂದಾಜು 2 ಕೋಟಿ ಬೆಲೆ ಬಾಳುವ ಗುಜರಿ ಬಿದ್ದಿದೆ.