ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು

(ನ್ಯೂಸ್ ಕಡಬ) newskadaba.com ಕಡಬ, ನ.3. ಗೂಗಲ್ ನಕ್ಷೆಯಲ್ಲಿ ಈಗ ಸ್ಥಳಗಳ ಹೆಸರು ಇಂಗ್ಲಿಷ್‍‌ನಲ್ಲಿ ಮಾತ್ರ ಅಲ್ಲ ಕನ್ನಡದಲ್ಲಿಯೂ ಲಭ್ಯವಿದೆ. ಇಲ್ಲಿಯವರೆಗೆ ಗೂಗಲ್ ಮ್ಯಾಪ್‍ನಲ್ಲಿ ಸ್ಥಳಗಳ ಹೆಸರು ಇಂಗ್ಲಿಷ್‍ನಲ್ಲಿ ಮಾತ್ರ ಕಾಣುತ್ತಿತ್ತು. ಇದೀಗ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಸ್ಥಳದ ಹೆಸರನ್ನು ಓದಬಹುದು.

ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಸಂತೋಷದ ಸುದ್ದಿ ಇದಾಗಿದೆ.

ಆಯಾ ಪ್ರಾಂತೀಯ ಭಾಷೆ ನಕ್ಷೆಯಲ್ಲಿ ಕಾಣಿಸಿಕೊಳ್ಳಲಿದೆ. ಗೂಗಲ್‌ನ ಈ ಕ್ರಮವನ್ನು ಪ್ರಶಂಸಿಸಿ, ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಸಂತೋಷ ವ್ಯಕ್ತಪಡಿಸಿ, ಗೂಗಲ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Also Read  ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ➤ ಅಪರಿಚಿತ ಪಾದಚಾರಿ ಮೃತ್ಯು

error: Content is protected !!
Scroll to Top