ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ►ಜೈ ತುಳುನಾಡು ಸಂಘಟನೆ ವತಿಯಿಂದ ಟ್ವೀಟ್ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.3. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳೂರಿನ ಜೈ ತುಳುನಾಡು ಸಂಘಟನೆಯ ವತಿಯಿಂದ 1 ಲಕ್ಷ ಟ್ವೀಟ್ ಅಭಿಯಾನವನ್ನು ನಡೆಸಲಾಯಿತು.

 

ಕರಾವಳಿ ಜಿಲ್ಲೆಯನ್ನು ಪ್ರತ್ಯೇಕ ತುಳುರಾಜ್ಯವಾಗಿ ಪರಿಗಣಿಸುವಂತೆ ಗಮನ ಸೆಳೆಯಲು ಕಪ್ಪು ದಿನವನ್ನಾಗಿ ಘೋಷಿಸಿ ಇನ್ನೊಂದು 1 ಲಕ್ಷ ಟ್ವೀಟ್ ಗುರಿಯನ್ನು ಅಭಿಯಾನವನ್ನು ಜೋಡಿಸಲಾಯಿತು. ಒಂದೇ ದಿನ 2 ಲಕ್ಷ ಟ್ವೀಟ್‌’ಗಳು ಟ್ರೆಂಡ್ ಆಯಿತು.

ಕನ್ನಡದಲ್ಲಿ ತುಳು ಭಾಷೆಯನ್ನು ಟೈಪ್ ಮಾಡಿದ ಟ್ವೀಟ್ಟಿಗರು, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದಿನವಿಡಿ ಟ್ವೀಟ್ ಮಾಡಿದರು. ಬೆಳಗ್ಗೆ 6 ಗಂಟೆಗೆ ಆರಂಭವಾದ ಟ್ವೀಟ್ ಮಧ್ಯರಾತ್ರಿ 12 ಗಂಟೆವರೆಗೆ ಮುಂದುವರಿದಿದೆ ಎಂದು ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಅಶ್ವತ್ಥ್ ತಿಳಿಸಿದ್ದಾರೆ.

Also Read  ಕಾಂತಾರ ಸಿನಿಮಾ ಜ.15ರಂದು ಟಿವಿಯಲ್ಲಿ ಪ್ರಸಾರ ➤ ನಟ ರಿಷಬ್ ಶೆಟ್ಟಿ

ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಹಾಗೂ ಕಪ್ಪು ದಿನವನ್ನಾಗಿ ಕರೆಸಿಕೊಂಡ ಟ್ವೀಟಿಗರು, 1 ಲಕ್ಷ ಟ್ವೀಟ್ ಅಭಿಯಾನ ಇದೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಹಿಂದೆ ಟ್ವೀಟ್ ಅಭಿಯಾನ ನಡೆಸಿದರೂ ಪರಿಣಾಮಕಾರಿಯಾಗಿರಲಿಲ್ಲ. ಹ್ಯಾಷ್‌’ಟ್ಯಾಗ್ ಸಮರ್ಪಕವಾಗಿ ಇರಲಿಲ್ಲ. ಈ ಬಾರಿ ಹ್ಯಾಷ್‌’ಟ್ಯಾಗ್‌’ನ್ನು ಒಂದೇ ವಾಕ್ಯದಲ್ಲಿ ನೀಡಲಾಗಿದೆ. ‘ಬ್ಲಾಕ್ ಡೇ ಫಾರ್ ತುಳುನಾಡ್’ ಎಂದು ಹ್ಯಾಷ್‌’ಟ್ಯಾಗ್ ನೀಡಲಾಗಿದ್ದು, ಸಂಜೆ 3 ಗಂಟೆಗೆ 80 ಸಾವಿರ ಟ್ವೀಟ್ ಮಾಡಲಾಗಿದೆ. ಇದರೊಂದಿಗೆ ನಿಗದಿತ 1 ಲಕ್ಷ ಗುರಿಯನ್ನು ಮಧ್ಯರಾತ್ರಿಯೊಳಗೆ ತಲುಪುತ್ತೇವೆ. ಇದೇ ರೀತಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ವಿಚಾರದ ಟ್ವೀಟ್ ಕೂಡ ರಾತ್ರಿ ವೇಳೆಗೆ 1 ಲಕ್ಷ ಗುರಿ ತಲುಪಲಿದೆ ಎನ್ನುತ್ತಾರೆ ಸಂಘಟಕರು. ಈ ಟ್ವೀಟ್‌’ನ್ನು ಪ್ರಧಾನಿ, ಗೃಹ ಸಚಿವರು ಹಾಗೂ ಸಂಸದರಿಗೆ, ಮುಖ್ಯಮಂತ್ರಿಗೆ ಕಳುಹಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದಾಗಲೂ ಸ್ವಯಂ ಆಗಿ ಟ್ವೀಟ್ ಅಭಿಯಾನ ನಡೆಸಲಾಗಿತ್ತು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಹಕ್ಕೊತ್ತಾಯ ಸಲ್ಲಿಸಲು ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್ ಬಗ್ಗೆ ಟ್ವಿಟರ್, ಫೇಸ್‌’ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗಿತ್ತು.

Also Read  ದ.ಕ ಜಿಲ್ಲಾ ಮಟ್ಟದ 21 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ

 

 

error: Content is protected !!
Scroll to Top