(ನ್ಯೂಸ್ ಕಡಬ) newskadaba.com ಮಂಗಳೂರು, ನ.2. ಇಲ್ಲಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಶ್ರೀಮತಿ ಸುಮತಿ ಹಾಗೂ ಸಹ ಪ್ರಾಧ್ಯಾಪಕ ಸದಾಶಿವ ಪ್ರಭು ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
ಇನ್ಫರ್ಮೇಶನ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ಸುಮತಿ ಅವರು ನಿಟ್ಟೆ ಎನ್,ಎಂ.ಎ.ಎಂ.ಐ.ಟಿ. ಡಾ.ನಿರಂಜನ ಚಿಪಳೂಣ್ಕರ್ ಅವರ ಮಾರ್ಗದರ್ಶನದಲ್ಲಿ ‘ಡಿಸ್ಕವರಿ ಆ್ಯಂಡ್ ಇಂಟಿಗ್ರೇಶನ್ ಆಫ್ ವೆಬ್ ಸರ್ವೀಸಸ್ ಯೂಸಿಂಗ್ ಡಾಟಾ ಮೈನಿಂಗ್ ಟೆಕ್ನಿಕ್’ ವಿಷಯದಲ್ಲಿ ಮಂಡಿಸಿದ್ದರು. ಹಾಗೂ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ಸದಾಶಿವ ಪ್ರಭು ಅವರು ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಡಾ. ಕಪಿಲನ್ ಮತ್ತು ಕೆಲಿಡೋನಿಯನ್ ಎಂಜಿನಿಯರಿಂಗ್ ಕಾಲೇಜಿನ ಡಾ.ನಾಗರಾಜ್ ಎಸ್. ನಾಯಕ್ ಅವರ ಮಾರ್ಗದರ್ಶನದಲ್ಲಿ ‘ಸಿಮ್ಯುಲೇಶನ್ ಸ್ಟಡಿ ಆಫ್ ಯೂರಿಯಾ ವಾಟರ್ ಸೊಲ್ಯೂಶನ್ ಇಂಜೆಕ್ಷನ್ ಸ್ಪ್ರೇ ಫಾರ್ ಡಿ ನೋಕ್ಸ್ ಸೆಲೆಕ್ಟೀವ್ ಕ್ಯಾಟಲಿಸ್ಟಿಕ್ ರಿಡಕ್ಷನ್ ಸಿಸ್ಟಮ್ ಆಫ್ ಡೀಸೆಲ್ ಎಂಜಿನ್ಸ್’ ವಿಷಯದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಮಂಡಿಸಿದ ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
ಸುಮತಿ ಅವರು ಕಾರ್ಕಳ ಹಿರಿಯಂಗಡಿಯ ವಾಸುದೇವ ರಾವ್ ಜಾದವ್ ಹಾಗೂ ಶಾರದಾ ಜಾದವ್ ಅವರ ಪುತ್ರಿ ಹಾಗೂ ಕಾರ್ಕಳದ ಅರವಿಂದ ಮೋಟಾರ್ಸ್‌ನ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಸೋಮಶೇಖರ್ ಪವಾರ್ ಅವರ ಪತ್ನಿ.
ಸದಾಶಿವ ಪ್ರಭು ಅವರು ಕುಂದಾಪುರ ಮಡಾಮಕ್ಕಿಯ ಎಂ.ದೇವದಾಸ ಪ್ರಭು ಹಾಗೂ ಯಶೋಧಾ ಪ್ರಭು ದಂಪತಿಯ ಪುತ್ರ.