ಈ ಯೋಗ ಫಲಗಳು ನಿಮ್ಮ ರಾಶಿಯಲ್ಲಿ ಇದ್ರೆ ನೀವೇ ಅದೃಷ್ಟವಂತ ವ್ಯಕ್ತಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸಾಮಾನ್ಯವಾಗಿ ಜಾತಕದಲ್ಲಿ ಗ್ರಹಗತಿಗಳ ಚಲನೆಯಿಂದ ಹಾಗೂ ಗ್ರಹಗತಿಗಳ ಬದಲಾವಣೆಯಿಂದ ಹಲವಾರು ಯೋಗ ಫಲಗಳು ದೊರೆಯುತ್ತವೆ, ಅದರಂತೆಯೇ ಕೆಲವು ಗ್ರಹಗಳ ಮೂಲಕ ಸುನಫಾ ಮತ್ತು ಅನಫಾ ಎಂಬ ಯೋಗ ಫಲಗಳು ಕೂಡ ದೊರೆಯುತ್ತವೆ ಇದರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತೇ ಇರುವುದಿಲ್ಲ, ಹಾಗಾದರೆ ಸುನಫಾ ಮತ್ತು ಅನಫಾ ಯೋಗಗಳು ಹೇಗೆ ಲಭಿಸುತ್ತವೆ ಇದರ ಫಲಗಳು ಏನು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಚಂದ್ರನು ಇರುವ ಮನೆಯಿಂದ ಮುಂದಿನ ಮನೆಯಲ್ಲಿ ಒಂದು ಗ್ರಹವಿದ್ದರೆ ಸುನಫಾ ಯೋಗವು ಲಭಿಸುತ್ತದೆ, ಅದು ಆ ಜಾತಕ ವ್ಯಕ್ತಿಗೆ ಸಂಪತ್ತು ಮತ್ತು ಖ್ಯಾತಿಯನ್ನು ನೀಡುತ್ತದೆ. ಇನ್ನು ಜನ್ಮ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಗ್ರಹ ಇದ್ದಲ್ಲಿ ಅನಫಾ ಯೋಗವು ಲಭಿಸುತ್ತದೆ, ಅನಫಾ ಯೋಗವು ಆ ಜಾತಕ ವ್ಯಕ್ತಿಗೆ ಉತ್ತಮ ಆರೋಗ್ಯ, ಖ್ಯಾತಿ ಮತ್ತು ಜೀವನದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನು ನೀಡುತ್ತದೆ. ಗ್ರಹಗಳಿಂದ ದೊರೆಯುವ ಯೋಗ ಫಲಗಳನ್ನು ನೋಡುವುದಾದರೆ ಮಂಗಳ ಸುನಫಾ ಯೋಗ, ಇದು ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಮಂಗಳ ಇದ್ದಲ್ಲಿ, ಮಂಗಳ ಸುನಫಾ ಯೋಗವು ಲಭಿಸುತ್ತದೆ, ಇದು ವ್ಯಕ್ತಿಯನ್ನು ಧೈರ್ಯವಂತರನ್ನಾಗಿ ಮಾಡುತ್ತದೆ ಮತ್ತು ಅಧಿಕ ಸಂಪತ್ತನ್ನು ಗಳಿಸುವಂತಹ ಅದೃಷ್ಟವು ಕೂಡ ನೀಡುತ್ತದೆ. ಇನ್ನು ಮಂಗಳ ಅನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಮಂಗಳ ಇದ್ದಲ್ಲಿ ಮಂಗಳ ಅನಫಾ ಯೋಗವು ಲಭಿಸುತ್ತದೆ, ಇದು ಒಬ್ಬ ವ್ಯಕ್ತಿಯನ್ನು ಗುಂಪಿನ ನಾಯಕರಾಗಿ ಮಾಡುತ್ತದೆ. ಇನ್ನು ಬುಧ ಸುನಫಾ ಯೋಗ, ಯಾವ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಬುಧ ಇರುತ್ತದೋ, ಇದರಿಂದ ಬುಧ ಸುನಫಾ ಯೋಗವು ಲಭಿಸುತ್ತದೆ, ಇದು ಆ ವ್ಯಕ್ತಿಯನ್ನು ಪವಿತ್ರ ಗ್ರಂಥಗಳು, ಸಂಗೀತ ಮತ್ತು ಕಲೆಯಲ್ಲಿ ಪ್ರವೀಣರನ್ನಾಗಿ ಮಾಡುತ್ತದೆ, ಇವರು ಕಾವ್ಯದ ಬಗ್ಗೆ ಒಲವು ಹೊಂದಿರುತ್ತಾರೆ ಮತ್ತು ಸುಂದರವಾದ ದೇಹ ಹಾಗೂ ಉದಾತ್ತವಾದ ಸ್ವಭಾವವನ್ನು ಹೊಂದಿರುತ್ತಾರೆ. ಬುಧ ಅನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಬುಧ ಇದ್ದಲ್ಲಿ ಬುದ್ಧ ಅನಫಾ ಯೋಗವು ಉಂಟಾಗುತ್ತದೆ.ಇನ್ನು ಗುರು ಸುನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಗುರು ಗ್ರಹ ಇದ್ದಲ್ಲಿ ಗುರು ಸುನಫಾ ಯೋಗವು ಲಭಿಸುತ್ತದೆ, ಇದು ಆ ವ್ಯಕ್ತಿಯನ್ನು ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಹೊಂದುವಂತೆ ಮಾಡುತ್ತದೆ ಮತ್ತು ಸಮಾಜದಲ್ಲಿ ಗೌರವ ದೊರೆಯುವಂತೆ ಮಾಡುತ್ತದೆ. ಗುರು ಅನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಗುರು ಇದ್ದಲ್ಲಿ, ಗುರು ಅನಫಾ ಯೋಗವು ಲಭಿಸುತ್ತದೆ, ಈ ವ್ಯಕ್ತಿಗಳು ಬುದ್ಧಿವಂತರಾಗಿರುತ್ತಾರೆ. ಇನ್ನು ಶುಕ್ರ ಸುನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಶುಕ್ರ ಇದ್ದಲ್ಲಿ ಶುಕ್ರ ಸುನಫಾ ಯೋಗವು ಲಭಿಸುತ್ತದೆ, ಇದು ಭೂಮಿ ಅಥವಾ ಆಸ್ತಿಯ ಮಾಲೀಕರನ್ನಾಗಿ ಮಾಡುತ್ತದೆ, ಇವರು ಧೈರ್ಯಶಾಲಿ ಆಗಿರುತ್ತಾರೆ ಮತ್ತು ಅಧಿಕಾರಿಗಳಿಂದ ಗುರುತಿಸಲ್ಪಡುತ್ತಾರೆ. ಶುಕ್ರ ಅನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಶುಕ್ರ ಇದ್ದಲ್ಲಿ, ಶುಕ್ರ ಅನಫಾ ಯೋಗವು ಲಭಿಸುತ್ತದೆ, ಈ ವ್ಯಕ್ತಿಗಳು ಪುರುಷರಾಗಿದ್ದಲ್ಲಿ ಸ್ತ್ರೀಯರ ಮಧ್ಯೆ ಹಾಗೂ ಸ್ತ್ರೀಯರಾಗಿದ್ದಲ್ಲಿ ಪುರುಷರ ಮಧ್ಯೆ ಜನಪ್ರಿಯರಾಗುತ್ತಾರೆ.ಇನ್ನು ಶನಿ ಸುನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಶನಿ ಇದ್ದಲ್ಲಿ ಶನಿ ಸುನಫಾ ಯೋಗವು ಲಭಿಸುತ್ತದೆ, ಆ ವ್ಯಕ್ತಿಯು ನ್ಯಾಯಪರವಾಗಿ ನಡೆದುಕೊಳ್ಳುತ್ತಾರೆ, ಕಠಿಣ ಪರಿಶ್ರಮಿ ಗಳಾಗಿರುತ್ತಾರೆ ಮತ್ತು ಅದೃಷ್ಟಶಾಲಿಯಾಗುತ್ತಾರೆ. ಶನಿ ಅನಫಾ ಯೋಗ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಶನಿಗ್ರಹ ಇದ್ದಲ್ಲಿ, ಶನಿ ಅನಫಾ ಯೋಗವು ಲಭಿಸುತ್ತದೆ, ಈ ವ್ಯಕ್ತಿಗಳು ಅದೃಷ್ಟಶಾಲಿ ಗಳಾಗಿರುತ್ತಾರೆ.

Also Read  ಸ್ಕೂಟಿ ಮತ್ತು ಬೈಕ್ ಢಿಕ್ಕಿ ➤ ಸ್ಕೂಟಿ ಸವಾರ ಸಾವು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top