ಗುರು ಪಟ್ಟಾಭಿಷೇಕಕ್ಕೆ ಒಂದು ತಿಂಗಳು ಇರುವಾಗಲೇ ► ಶಿವಮೊಗ್ಗದಲ್ಲಿ ನೇಣಿಗೆ ಶರಣಾದ ಉಜಿರೆಯ ಕ್ರೈಸ್ತ ಪಾದ್ರಿ!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.1. ಉಜಿರೆಯ ವ್ಯಕ್ತಿಯೋರ್ವರು ಶಿವಮೊಗ್ಗದ ಆಲ್ಕೋಳದಲ್ಲಿರುವ ಚೈತನ್ಯ ರೂರಲ್ ಡೆವಲಪ್‌ಮೆಂಟ್‌ ಸೊಸೈಟಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉಜಿರೆ ಮೂಲದ ಸುನೀಲ್‌ ಫರ್ನಾಂಡಿಸ್(33) ಎಂದು ಗುರುತಿಸಲಾಗಿದೆ. ಮೇ ತಿಂಗಳಲ್ಲಿ ಉಜಿರೆಯಿಂದ ಪಾದ್ರಿ ತರಬೇತಿಗಾಗಿ ಶಿವಮೊಗ್ಗಕ್ಕೆ ತೆರಳಿದ್ದ ಸುನೀಲ್, ಬ್ರದರ್‌ ದೀಕ್ಷೆ ಪಡೆದು ತರಬೇತಿ ಪಡೆಯುತ್ತಿದ್ದರು. 14 ವರ್ಷಗಳ ಗುರು ಸೇವೆ ಪೂರ್ಣಗೊಂಡು ಮುಂದಿನ ತಿಂಗಳು ಪಟ್ಟಾಭಿಷೇಕಕ್ಕೆ ತಯಾರಿ ನಡೆಯುತ್ತಿತ್ತು. ಈ ವೇಳೆಯೇ ಸುನೀಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು,  ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾಣಿಯೂರು ಗ್ರಾಮ ಡಿಜಿಟಲ್ ಗ್ರಾಮವಾಗಿ ಆಯ್ಕೆ

error: Content is protected !!
Scroll to Top