ಕಡಬ: ಸೈಂಟ್ ಜೋಕಿಮ್ಸ್‌ ವಿದ್ಯಾಸಂಸ್ಥೆಯಲ್ಲಿ ಸ್ನೇಹ ಸಂಗಮ ಕಾರ್ಯಕ್ರಮ ► ವಿದ್ಯಾರ್ಥಿ ಹಾಗೂ ವಿದ್ಯಾಸಂಸ್ಥೆಯ ಬಾಂಧವ್ಯ ಗಟ್ಟಿಗೊಳಿಸಲು ಇದು ಸೂಕ್ತ ವೇದಿಕೆ- ಈಶೋ ಪಿಲಿಫ್

(ನ್ಯೂಸ್ ಕಡಬ) newskadaba.com ಕಡಬ, ನ.1. ಇಲ್ಲಿನ ಸೈಂಟ್ ಜೋಕಿಮ್ಸ್‌ ವಿದ್ಯಾಸಂಸ್ಥೆಯಲ್ಲಿ ಫಾ| ರೋನಾಲ್ಡೋ ಲೋಬೋರವರ ಅಧ್ಯಕ್ಷತೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯಗುರು ಈಶೋ ಪಿಲಿಫ್ರವರು ಸಂಘಟನಾ ಶಕ್ತಿಯ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾಸಂಸ್ಥೆಯ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸ್ನೇಹ ಸಂಗಮ ಕಾರ್ಯಕ್ರಮವು ಸೂಕ್ತ ವೇದಿಕೆ ಆಗಲಿದೆ ಎಂದು ಪ್ರಶಂಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಚಾಲಕರಾದ ರೆ|ಫಾ| ರೋನಾಲ್ಡ್‌ ಲೋಬೋರವರು ಸಂಸ್ಥೆಯ ಧ್ಯೇಯೋದ್ದೇಶ ಸಹಕಾರಗೊಳ್ಳಲು ಹಿರಿಯ ವಿದ್ಯಾರ್ಥಿ ಸಂಘಟನೆಯ ಶ್ರಮ, ಪೋಷಕರ ಬೆಂಬಲ ಅಗತ್ಯ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿಗಳ ಸಹಕಾರದೊಂದಿಗೆ ರೂಪುಗೊಳಿಸಿದ ಸಂಸ್ಥೆಯ ವೆಬ್ಸೈಟ್ನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಪೂರ್ವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಮಹಮ್ಮದ್ ಫೈಝಲ್ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲೂಯಿಸ್ ಮಸ್ಕರೇನಸ್, ರಕ್ಷಕ-ಶಿಕ್ಷಕ ಸಮಿತಿಯ ಉಪಾಧ್ಯಕ್ಷ ಶಾಜಿ ಜಾನ್, ಕೃಷ್ಣ, ಗಂಗಾಧರ್, ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಲಿಲ್ಲಿ ಮೋನಿಕಾ ರೆಬೆಲ್ಲೋ, ಕಿರಣ್ ಕುಮಾರ್, ಸುಪ್ರಿತಾ ಶಾಜಿ ಉಪಸ್ಥಿತರಿದ್ದರು. ಶಿಕ್ಷಕಿ ಗ್ರೇಸಿ ಪಿಂಟೋ ಸ್ವಾಗತಿಸಿ, ಸುಪ್ರೀತಾ ಶಾಜಿ ವಂದಿಸಿ, ಸುಜಾ ಶಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜೇಶ್ ನರಾಡಿಯವರು ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top