ಕಡಬ: ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕಾದರೆ ಊರ ಜನರ ಸಹಕಾರ ಅಗತ್ಯ ►ಶಾಸಕ ಎಸ್‌. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, .1. ಮರ್ದಾಳ- ಸುಬ್ರಹ್ಮಣ್ಯ ರಸ್ತೆಯ ಐತ್ತೂರು ಸಂಪರ್ಕಿಸುವ ಜಿ.ಪಂ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಅಂಗಾರ ಅವರು ನೆರವೇರಿಸಿದರು.

3.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅಂಗಾರ ಅವರು, ಪ್ರಾಮಾಣಿಕ ಮನಸ್ಸಿನಿಂದ ಜನರು ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡು ಜನಹಿತಕ್ಕಾಗಿ ಶ್ರಮಿಸುವ ಜನಪ್ರತಿನಿಧಿಗಳಿಗೆ ಜನರು ನಿಜವಾದ ಗೌರವವನ್ನು ಸಲ್ಲಿಸುತ್ತಾರೆ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು. ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕಾದರೆ ಊರ ಜನರ ಸಹಕಾರವು ಅತ್ಯಗತ್ಯ. ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುವ ವೇಳೆ ಜಮೀನಿನ ತಕರಾರುಗಳು ಎದುರಾಗಿ ಕಾಮಗಾರಿಗೆ ಅಡಚಣೆಯಾಗದ ರೀತಿಯಲ್ಲಿ ಸ್ಥಳೀಯ ಪ್ರಮುಖರು ಮುತುವರ್ಜಿ ವಹಿಸಬೇಕು. ಸರಕಾರಿ ಅನುದಾನ ಸದ್ಬಳಕೆಯಾಗಬೇಕು ಎಂದು ಹೇಳಿದರು.

ಬಿಜೆಪಿ ಕಡಬ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್‌ ಮಾತನಾಡಿ, ಶಾಸಕರ ಮೂಲಕ ಕಡಬ ಭಾಗಕ್ಕೆ ಅನುದಾನಗಳ ಮಹಾ ಪೂರವೇ ಹರಿದುಬಂದಿವೆ. ಅನುದಾನ ಬಿಡುಗಡೆಗೆ ಮೊದಲೇ ಕಾಮಗಾರಿಗಳ ಶಂಕುಸ್ಥಾಪನೆ ನಡೆಸಿ ಬಳಿಕ ಅತ್ತ ತಿರುಗಿಯೂ ನೋಡದ ಜನಪ್ರತಿನಿಧಿಗಳ ನಡುವೆ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ನೆರವೇರಿಸಿ ಕೊಡುವ ನಮ್ಮ ಶಾಸಕ ಎಸ್‌. ಅಂಗಾರ ಅವರು ಭಿನ್ನವಾಗಿ ನಿಲ್ಲುತ್ತಾರೆ. ತನ್ನ ಸ್ವಂತ ವರ್ಚಸ್ಸಿನ ಮೂಲಕ ಅನುದಾನಗಳನ್ನು ತರಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಿಸುತ್ತಿರುವ ಶಾಸಕರ ಕೆಲಸ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

Also Read  ಬಿಜೆಪಿ ಗ್ರಾಮ ಸಮಿತಿ ಸಭೆ ►ಎನ್.ಡಿ.ಎ ಸರಕಾರದ ಜನಪರ ಯೋಜನೆಗಳು ಪ್ರತಿ ಮನೆಗೂ ತಿಳಿದಿರಬೇಕು

ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಎಪಿಎಂಸಿ ಸದಸ್ಯರಾದ ಪುಲಸ್ತ್ಯಾ ರೈ, ಮೇದಪ್ಪ ಗೌಡ ಡೆಪ್ಪುಣಿ, ಕಡಬ ಶಕ್ತಿಕೇಂದ್ರದ ಪ್ರ. ಕಾರ್ಯದರ್ಶಿ ಪ್ರಕಾಶ್‌ ಎನ್‌.ಕೆ., ಮಾಜಿ ಅಧ್ಯಕ್ಷ ಸತೀಶ್‌ ನಾಯಕ್‌ ಕಡಬ, ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ ಕೊಣಾಜೆ, ಸದಸ್ಯರಾದ ಚಂದ್ರಾವತಿ, ಪುಷ್ಪಕುಮಾರಿ, ಪೊಡಿಯ ಗೌಡ, ಮಾಜಿ ಸದಸ್ಯ ಸಂಜೀವ ಪೂಜಾರಿ, ವಾಸುದೇವ ಭಟ್‌ ಕಡ್ಯ, ಚಂದ್ರಶೇಖರ ಗೌಡ ಕಡಂಪಳ, ಮೋಹನದಾಸ್‌, ಸುಂದರ ಗೌಡ ದೊಡ್ಡಮನೆ, ರೋಹಿತ್‌ ಶಿರಾಡಿ, ಪದ್ಮನಾಭ ಗೌಡ ಮಳೇಲ, ಶಂಕರ ಸಿ.ಆರ್‌. ಕಾಲನಿ, ಗಿರಿಜಾ, ಯೋಗಿತಾ, ಮೀನಾಕ್ಷಿ ಕನಿಯ ಉಪಸ್ಥಿತರಿದ್ದರು.

Also Read  ವಿಟ್ಲದಲ್ಲಿ ಗಾಂಜಾ ಸಹಿತ ಓರ್ವನ ಬಂಧನ ➤ ಮತ್ತೋರ್ವ ಎಸ್ಕೇಪ್.!

 

error: Content is protected !!
Scroll to Top