ನೂಜಿಬಾಳ್ತಿಲ ಗ್ರಾ.ಪಂ.ಸಾಮಾನ್ಯ ಸಭೆ ► ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗ್ರಾ.ಪಂ.ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ನ.1. ನೂಜಿಬಾಳ್ತಿಲ-ರೆಂಜಿಲಾಡಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕೆಂದು ದೇವಸ್ಥಾನ ಪ್ರಾರ್ಥನಾ ಮಂದಿರಗಳು, ಮಸೀದಿ ಚರ್ಚ್, ಸಂಘ ಸಂಸ್ಥೆಗಳು ಗ್ರಾಮಸ್ಥರು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಸದಸ್ಯೆ ಪುಷ್ಪಲತಾ ಪೇರಡ್ಕರವರು ಗ್ರಾ.ಪಂ.ಆಡಳಿತ ಮಂಡಳಿ, ಗ್ರಾಮಸ್ಥರು ಸೇರಿಕೊಂಡು ಅಷ್ಟೊಂದು ಹೋರಾಟ ನಡೆಸಿದರು ಮದ್ಯದಂಗಡಿ 2,3 ಬಾರಿ ಬಂದ್ ಮಾಡಿಸಿದ್ದರೂ ಮತ್ತೇ ನ್ಯಾಯಾಲಯದಿಂದ ತಡೆ ತಂದು ತೆರೆಯಲಾಗಿದೆ. ಈ ಬಗ್ಗೆ ಗ್ರಾ.ಪಂ.ನಿಂದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದಲ್ಲದೆ ನ್ಯಾಯಾಲಯದಲ್ಲಿ ಸ್ಥಳೀಯ ಆಡಳಿತವಾಗಿರುವ ನಮ್ಮ ಪಂಚಾಯತ್ನಿಂದ ದಾವೆ ಹೂಡಬೇಕೆಂದು ಆಗ್ರಹಿಸಿದ್ದೇವೆ. ಈ ಬಗ್ಗೆ ಏನು ಕ್ರಮ ಜರಗಿಸಲಾಗಿದೆ ಎಂದು ಪ್ರಶ್ನಿಸಿದರು. ವಿಚಾರದ ಬಗ್ಗೆ ಉತ್ತರಿಸಿದ ಅಧ್ಯಕ್ಷ ಸದಾನಂದ ಗೌಡರವರು ಸದಸ್ಯರ ಸಲಹೆಯಂತೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಎಲ್ಲಾ ರೀತಿಯ ಕ್ರಮಗಳನ್ನು ಗ್ರಾ.ಪಂ.ವ್ಯಾಪ್ತಿಗೊಳಪಟ್ಟಂತೆ ಮಾಡಲಾಗಿದೆ. ಆದರೂ ಮದ್ಯ ಮಾರಾಟಗಾರರು ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದ ಪ್ರಕಾರ ಅಲ್ಲಿ ಮದ್ಯ ವ್ಯಾಪಾರ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರ ಬೇಡಿಕೆಯಂತೆ ಸಂಬಂದಪಟ್ಟ ಎಲ್ಲಾ ಇಲಾಖಾಧಿಕಾರಿಗಳಿಗೆ ನಮ್ಮ ಗ್ರಾ.ಪಂ.ನ್ನು ಮದ್ಯ ಮುಕ್ತ ಗ್ರಾಮ ಪಂಚಾಯತ್ನ್ನಾಗಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ ಎಂದರು. ಇದಕ್ಕೆ ಮತ್ತೇ ಪ್ರಶ್ನಿಸಿದ ಸದಸ್ಯೆ ಪುಷ್ಪಲತಾರವರು ಹಾಗಾದರೆ ನ್ಯಾಯಾಲಯದ ತಡೆಯಾಜ್ಞೆ ಬಗ್ಗೆ ತಾವು ಕಾನೂನಾತ್ಮಕವಾಗಿ ವಾದ ಮಂಡಿಸಿದ್ದೀರಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಆನಂದರವರು ಗ್ರಾ.ಪಂ.ಸ್ಥಳೀಯಾಡಳಿತವಾಗಿದ್ದು ಲೋಕಪಾಲ್ ನಿಯಮದಡಿ ಬರುವುದರಿಂದ ಗ್ರಾ.ಪಂ.ಅಧ್ಯಕ್ಷರ ನೆಲೆಯಲ್ಲಿ ನ್ಯಾಯಾಲಯಕ್ಕೆ ವಾದ ಮಂಡಿಸಲು ಬರುವುದಿಲ್ಲ. ಆದರೆ ಅವರ ವೈಯಕ್ತಿಕ ನೆಲೆಯಲ್ಲಿ ವರ್ತಿಸಬಹುದು ಎಂದು ಸಮಜಾಹಿಷಿಕೆ ನೀಡಿ ಸಮಸ್ಯೆಗೆ ತೆರೆ ಎಳೆದರು.

ಈಗಾಗಲೇ ಗ್ರಾ.ಪಂ.ವ್ಯಾಫ್ತಿಯಲ್ಲಿ ಸಂಪೂರ್ಣ ಸ್ವಚ್ಚತೆಗೆ ಆದ್ಯತೆ ನೀಡುವುದಲ್ಲದೆ ಸಾರ್ವಜನಿಕವಾಗಿರುವ ಕಸ ಸ್ವಚ್ಚಗೊಳಿಸಬೇಕಾಗಿದೆ. ಆದರೆ ಈ ಶೇಖರಿಸಿದ ಕಸ ವಿಲೇವಾರಿಗೆ ಇನ್ನೂ ಜಾಗದ ವ್ಯವಸ್ಥೆ ಆಗಿರುವುದಿಲ್ಲ. ಹಾಗಾದರೆ ಹೇಗೆ ಕಸ ವಿಲೇವಾರಿ ಮಾಡುವುದು ಎಂದು ಪುಷ್ಪಲತಾ ಪ್ರಶ್ನಿಸಿದರು. ವಿಚಾರದ ಬಗ್ಗೆ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಜಾಗವಿದ್ದರೆ ತ್ಯಾಜ್ಯ ಘಟಕ ಸ್ಥಾಪಿಸಿ ಕಸವಿಲೇವಾರಿ ಮಾಡಬಹುದು ಎಂಬಂತೆ ಮತ್ತೇ ಮಾತನಾಡಿದ ಪುಷ್ಪಲತಾ ನೀವು ಪ್ರಭಾವಿ ವ್ಯಕ್ತಿ ಇರುವಾಗ ಏನು ಸಮಸ್ಯೆ ಕೂಡಲೇ ವ್ಯವಸ್ಥೆ ಮಾಡಿ ಎಂದು ಚಟಾಕಿ ಹಾಕಿದರು. ಈ ಬಗ್ಗೆ ಉತ್ತರಿಸಿ ಮಾತನಾಡಿದ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಸರಕಾರಿ ಜಾಗ ಎಲ್ಲಿ ಇದ್ದರೂ ಅಧಿಕಾರಿಗಳಿಂದ ಜಾಗ ತೋರಿಸಿ ಗಡಿ ಗುರುತು ಮಾಡಿಸಿ ಕ್ರಮ ಕೈಗೊಳ್ಳಬಹುದು. ಆದರೆ ಸರಕಾರಿ ಜಾಗ ಎಲ್ಲಿ ಇದೆ ಎಂಬುದನ್ನು ಹುಡುಕುತ್ತಿದ್ದೇವೆ, ಎಂದರು. ಇದಕ್ಕೆ ಮತ್ತೇ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಗ್ರಾಮಕರಣಿಕರಲ್ಲಿ ವಿಚಾರಿಸಿ ಸರಕಾರಿ ಜಾಗ ಎಲ್ಲಿಯಾದರೂ ಇದ್ದರೆ ಕೂಡಲೇ ಅದನ್ನು ರಿಸರ್ವ್ವೇಶನ್ ಮಾಡಿಸಿ ಕಸವಿಲೇವಾರಿ ಘಟಕವನ್ನು ನಿರ್ಮಿಸಲು ಕೈಗೊಳ್ಳುವ ಎಂದು ಹೇಳಿದರು.

Also Read  ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ‘ಮಾಹಿತಿ ಹಕ್ಕು ಕಾಯ್ದೆ 2005’ ಕುರಿತು ಕಾರ್ಯಗಾರ

ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸ್ಥಾವರದ ಪಂಪುಗಳು ಆಗಾಗ ಹಾಳಾಗುತ್ತಿದ್ದು ಇದರ ರಿಪೇರಿಗೆ ಪಂಚಾಯತ್ನ ಹೆಚ್ಚಿನ ಅನುದಾನ ವ್ಯಯಿಸಲಾಗುತ್ತಿದೆ. ಪಂಪುಗಳ ದುರಸ್ಥಿ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಉತ್ತರಿಸಿ ಮಾತನಾಡಿದ ಅಧ್ಯಕ್ಷ ಸದಾನಂದ ಗೌಡ ಇನ್ನೂ ಮುಂದಕ್ಕೆ ಪಂಪು ಹಾಳಾದಂತೆ ಸಂಬಂಧಪಟ್ಟ ಆಯಾಯ ವಾರ್ಡ್ನ ಸದಸ್ಯರ ಗಮನಕ್ಕೆ ತರುವ ಮೂಲಕ ಅವರಿಗೆ ಸರಿಯಾದ ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪಡಿತರ ಸಮಸ್ಯೆ ಬಗ್ಗೆ ಮಾತನಾಡಿದ ಸದಸ್ಯ ರಾಮಚಂದ್ರ ಗೌಡ ಮೊದಲು ತಿಂಗಳ 2ನೇ ವಾರದಲ್ಲಿ ಪಡಿತರ ಸಾಮಾಗ್ರಿ ಹಾಗೂ ಬಿಲ್ಲ್‌ ಬರುತ್ತಿದ್ದು ತಿಂಗಳ 10ನೇ ತಾರೀಖಿನಿಂದ ಪಡಿತರ ವಿತರಿಸುವ ವ್ಯವಸ್ಥೆ ನಡೆಯುತ್ತಿದ್ದು ಆದರೆ ಈಗ ಕೆಲವು ತಿಂಗಳಿನಿಂದ ತಿಂಗಳ 2ನೇ ವಾರದಲ್ಲಿ ಪಡಿತರ ಸಾಮಾಗ್ರಿಗಳು ಪಡಿತರ ಅಂಗಡಿಗೆ ರವಾಣೆಯಾಗುತ್ತಿದ್ದರೂ ತಿಂಗಳ ಕೊನೆಯ 25ನೇ ತಾರೀಖಿನ ಬಳಿಕ ಬಿಲ್ಲ್‌ ಬಂದು ಪಡಿತರ ವಿತರಿಸುವ ವ್ಯವಸ್ಥೆಯಾಗುತ್ತಿದ್ದು ಈ 4,5 ದಿನಗಳಲ್ಲಿ 2 ಗ್ರಾಮದ ಗ್ರಾಮಸ್ಥರಿಗೆ ಪಡಿತರ ಪಡೆದುಕೊಳ್ಳಲು ಅನಾನುಕೂಲವಾಗುತ್ತಿದ್ದು 2,3 ದಿನ ಪಡಿತರ ಅಂಗಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಇಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಾಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಮೊದಲಿನಂತೆ ಪ್ರತೀ ತಿಂಗಳ 10ನೇ ತಾರೀಖಿನಿಂದ ಪಡಿತರ ವಿತರಿಸುವಂತಾಗಬೇಕು ಎಂದು ಆಗ್ರಹಿಸಿದರು. ವಿಚಾರದ ಬಗ್ಗೆ ಧ್ವನಿಗೂಡಿಸಿದ ಸದಸ್ಯೆ ಜಾನಕಿ ಮಾತನಾಡಿ ನಾವು ಕೂಲಿ ಕೆಲಸಕ್ಕೆ ಹೋಗುವವರು ಕೆಲಸ ಬಿಟ್ಟು ಇಲ್ಲಿ ಪಡಿತರಕ್ಕಾಗಿ 2,3 ಸಲ ಹೋಗಿ ಸರದಿಯಲ್ಲಿ ನಿಲ್ಲಲು ಸಾಧ್ಯವಿಲ್ಲ, ನಮಗೆ ಹೋದ ದಿವಸವೇ ಪಡಿತರ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು. ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Also Read  ಪುತ್ತೂರು ಲಂಚ ಸ್ವೀಕರಿಸುತ್ತಿದ್ದ ವೈದ್ಯಾಧಿಕಾರಿ ಎಸಿಬಿ ಬಲೆಗೆ

ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ ಕೊಪ್ಪ, ಸದಸ್ಯರಾದ ಕೆ.ಜೆ ತೋಮಸ್, ಹರೀಶ್ ಎನ್, ರಾಜು ಗೋಳಿಯಡ್ಕ, ಪಿ.ಯು ಸ್ಕರಿಯಾ, ರಜಿತಾ ಪದ್ಮನಾಭ, ಅಮ್ಮಣಿ ಜೋಸೆಫ್, ವಲ್ಸ ಕೆ.ಜೆ, ಹೊನ್ನಮ್ಮ ಪಾಲೆತ್ತಡ್ಕ ಚರ್ಚೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಸ್ವಾಗತಿಸಿ, ವರದಿ ವಾಚಿಸಿದರಲ್ಲದೆ ಸರಕಾರದ ಸುತ್ತೋಲೆಯನ್ನು ಓದಿ ಕೊನೆಗೆ ವಂದಿಸಿದರು.

ರೆಂಜಿಲಾಡಿ ಗ್ರಾಮದ ಅಣ್ಣಪ್ಪ ಹಾಗೂ ಅವರ ಧರ್ಮಪತ್ನಿ ದಂಪತಿಗಳಿಬ್ಬರು ಕಳೆದ ಕೆಲವು ದಿನದ ಹಿಂದೆ ನಿಧನ ಹೊಂದಿದ್ದು ಅವರ ಮೂವರು ಮಕ್ಕಳು ತಬ್ಬಲಿಗಲಾದ್ದಾರೆ. ಈ  ಮೂವರು ಮಕ್ಕಳ ಭವಿಷ್ಯತ್ತಿನ ಹಿತದೃಷ್ಟಿಯಿಂದ ದ.ಕ.ಜಿಲ್ಲಾ ಯೋಜನಾಧಿಕಾರಿ ಮಾಮಚ್ಚನ್ರವರು ಈಗಾಗಲೇ ಇಬ್ಬರು ಮಕ್ಕಳನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಹಾಸ್ಟೆಲ್ಗೆ ಸೇರಿಸಿ ವಿದ್ಯಾಭ್ಯಾಸ ನೀಡಲು ಕ್ರಮ ಕೈಗೊಂಡಿದ್ದರೆ ಮೂರನೇ ಮಗುವಿನ ವಿದ್ಯಾಭ್ಯಾಸ ಬಗ್ಗೆ ಕೂಡ ಕ್ರಮಕೈಗೊಂಡಿರುತ್ತಾರೆ. ಇವರಿಗೆ ಗ್ರಾ.ಪಂ.ವತಿಯಿಂದ ಸಾಮಾನ್ಯ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

error: Content is protected !!
Scroll to Top