ಜೀವನದಲ್ಲಿ ನೆಮ್ಮದಿ ಬೇಕು ಎನ್ನುವವರು ತಪ್ಪದೇ ಈ ನಿಯಮಗಳನ್ನು ಅನುಸರಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜೀವನದಲ್ಲಿ ಎಲ್ಲದಕ್ಕಿಂತ ದೊಡ್ಡದು ಎಂದರೆ ಅದು ನೆಮ್ಮದಿ, ನೆಮ್ಮದಿ ಎನ್ನುವುದು ಬಡವನಿಂದ ಹಿಡಿದು ಶ್ರೀಮಂತರವರೆಗೂ ಪ್ರತಿಯೊಬ್ಬರಿಗೂ ಅಗತ್ಯವಾದದ್ದು, ಈ ಒಂದು ನಿಮ್ಮದಿ ದುಡ್ಡು ಕೊಟ್ಟರೆ ಸಿಗುವುದಿಲ್ಲ, ಹಾಗಾಗಿ ಎಷ್ಟೇ ಹಣವಂತ ನಾಗಿದ್ದರೂ ಕೂಡ ನೆಮ್ಮದಿಗಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ಜೀವನದಲ್ಲಿ ಇಂತಹ ನೆಮ್ಮದಿ ಬೇಕು ಎಂದರೆ ಗರುಡ ಪುರಾಣದಲ್ಲಿ ತಿಳಿಸಿರುವ ಹಾಗೆ ಕೆಲವು ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವುಗಳನ್ನು ಪಾಲಿಸಿಕೊಂಡು ಬರಬೇಕು, ಈ ರೀತಿ ಮಾಡುವುದರಿಂದ ಜೀವನದಲ್ಲಿ ನೆಮ್ಮದಿಯ ಜೊತೆಗೆ ಅದೃಷ್ಟವು ಬರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಗರುಡ ಪುರಾಣದ ಪ್ರಕಾರ ಜೀವನದಲ್ಲಿ ನೆಮ್ಮದಿ ಬೇಕು ಎಂದರೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಗೋವಿಗೆ ಹಿಂದೂ ಧರ್ಮದಲ್ಲಿ ಮಹತ್ತರವಾದ ಸ್ಥಾನವಿದೆ, ಹಸುವಿನ ಶರೀರದ ಬೇರೆ ಬೇರೆ ಭಾಗಗಳಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ, ಇದನ್ನು ಹಸು, ಕಾಮದೇನು, ಗೋಮಾತೆ ಎಂದು ಪೂಜಿಸಲಾಗುತ್ತದೆ, ಹಾಗಾಗಿ ಸಾಧ್ಯವಾದಾಗಲೆಲ್ಲ ಗೋಮಾತೆಯನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ, ಹಾಗೂ ಜೀವನದಲ್ಲಿ ವಿಶೇಷವಾಗಿ ನೆಮ್ಮದಿ ಎನ್ನುವುದು ದೊರೆಯುತ್ತದೆ. ಇನ್ನು ಎರಡನೆಯದಾಗಿ ವಿಷ್ಣು ಪುರಾಣದ ಅನುಸಾರ ವಿಷ್ಣು ತನ್ನ ಭಕ್ತರ ದುಃಖವನ್ನು ದೂರ ಮಾಡುತ್ತಾನೆ ಎಂದು ಹೇಳಲಾಗುತ್ತದೆ, ಜೊತೆಗೆ ಜೀವನದಲ್ಲಿ ಸುಖ ಶಾಂತಿ ಸಿಗುವಂತೆ ಮಾಡುತ್ತಾನೆ, ಯಾರು ತಮ್ಮ ದಿನದ ಆರಂಭವನ್ನು ವಿಷ್ಣುವಿನ ಪೂಜೆ ಅರ್ಚನೆಯಿಂದ ಆರಂಭಿಸುತ್ತಾನೋ ಅವರ ಎಲ್ಲ ಕಾರ್ಯದಲ್ಲೂ ಸಫಲತೆ ಸಿಗುತ್ತದೆ, ಇದರಿಂದ ಅವರಿಗೆ ನೆಮ್ಮದಿಯು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ತುಳಸಿ ಕೂಡ ಭಗವಂತನ ರೂಪ, ತುಳಸಿಯನ್ನು ಮನೆಯಲ್ಲಿ ನೆಡಬೇಕು, ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡಿದರೆ ಶುಭ,ಹಾಗಾಗಿ ಪ್ರತಿದಿನ ವಿಷ್ಣು ಪೂಜೆಯ ನಂತರ ತುಳಸಿ ಪೂಜೆ ಮಾಡಿ, ಇದರಿಂದ ನೆಮ್ಮದಿಯ ಜೊತೆಗೆ ಅದೃಷ್ಟವು ಲಭಿಸುತ್ತದೆ. ಇನ್ನು ಗಂಗಾ ನದಿಯನ್ನು ಎಲ್ಲಾ ನದಿಗಳಿಗಿಂತ ಶ್ರೇಷ್ಟವೆಂದು ಪೂಜಿಸಲಾಗುತ್ತದೆ, ಗಂಗಾ ನದಿಯನ್ನು ದೇವತೆ ಎಂದೇ ಪೂಜಿಸುತ್ತಾರೆ, ಗಂಗಾ ನದಿಗೆ ಯಾವುದೇ ರೂಪದಲ್ಲೂ ಅಪಮಾನ ಮಾಡುವುದು ಸರಿಯಲ್ಲ, ಗಂಗಾ ನದಿಯನ್ನು ಪೂಜಿಸುತ್ತಿದ್ದರೆ, ಪ್ರತಿಯೊಂದು ಕೆಲಸದಲ್ಲಿ ಸಫಲತೆ ಸಿಗುತ್ತದೆ, ಇದರಿಂದ ನೆಮ್ಮದಿಯೂ ಸಿಗುತ್ತದೆ. ಇನ್ನು ಗ್ರಂಥ ಮತ್ತು ಪುರಾಣದಲ್ಲಿ ಏಕಾದಶಿ ವ್ರತ ಮಾಡುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ, ಯಾರು ಪೂರ್ತಿ ಶ್ರದ್ಧೆ ಮತ್ತು ಭಕ್ತಿಯಿಂದ ಏಕಾದಶಿ ವ್ರತ ಮಾಡುತ್ತಾರೋ ಅವರಿಗೆ ಖಂಡಿತವಾಗಿಯೂ ಶುಭ ಫಲ ಸಿಗುತ್ತದೆ. ಇನ್ನು ಪಂಡಿತ ಅಥವಾ ಜ್ಞಾನಿಗೆ ಗೌರವ ಕೊಡುವುದು ಉತ್ತಮ, ಹಲವಾರು ಜನ ಇದನ್ನು ತಮಾಷೆ ಮಾಡುತ್ತಾರೆ, ಆದರೆ ಯಾವ ಮನುಷ್ಯ ಜ್ಞಾನಿಗೆ ಗೌರವ ನೀಡುತ್ತಾರೋ ಅವರ ಜೀವನದಲ್ಲಿ ಸಫಲತೆ ಸಿಗುತ್ತದೆ. ಹೀಗೆ ಗರುಡ ಪುರಾಣದಲ್ಲಿ ತಿಳಿಸಿರುವ ಹಾಗೆ ಈ ರೀತಿಯ ನಿಯಮಗಳನ್ನು ಅನುಸರಿಸಿ ಕೊಂಡು ಬಂದರೆ ಜೀವನದಲ್ಲಿ ನೆಮ್ಮದಿಯ ಜೊತೆಗೆ ಅದೃಷ್ಟವು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

Also Read  ಖಾಸಗಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top