ನಾಳೆ:(ನ.1ರಂದು) ಮರ್ದಾಳದಲ್ಲಿ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ► ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಅ.31. ಶ್ರೀವಿವೇಕಾನಂದ ಯುವಕ ಮಂಡಲ(ರಿ.) ಮರ್ದಾಳ ಇದರ ವತಿಯಿಂದ 21ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಪುರುಷರ 55ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನ.1ರಂದು ಮರ್ದಾಳ ಶ್ರೀಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ.

 

ಬೆಳಿಗ್ಗೆ 10.00ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಗೇರು ನಿಗಮದ ನಿವೃತ್ತ ಮ್ಯಾನೇಜರ್ ಗಂಗಾಧರ ಗೌಡ ಪಂಜೋಡಿ ಉದ್ಘಾಟಿಸಲಿದ್ದು ಪ್ರಗತಿಪರ ಕೃಷಿಕರಾದ ಪ್ರೇಮಸಾಗರ ಆಳ್ವ ಅತ್ಲಾಜೆ ಧ್ವಜಾರೋಹಣಗೈಯಲಿದ್ದಾರೆ. ಸಭಾ ಅಧ್ಯಕ್ಷತೆಯನ್ನು ಶ್ರೀವಿವೇಕಾನಂದ ಯುವಕ ಮಂಡಲದ ಅಧ್ಯಕ್ಷರಾದ ಪ್ರಮೋದ್ ರೈ ಕುಡಾಲ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಪುತ್ತೂರು ಎಪಿಎಂಸಿ ನಿರ್ದೇಶಕರಾದ ಮೇದಪ್ಪ ಗೌಡ ಡೆಪ್ಪುಣಿ ಭಾಗವಹಿಸಲಿದ್ದಾರೆ. ಬಳಿಕ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ.

Also Read  ಕಲುಷಿತ ನೀರು ಸೇವಿಸಿ ವಾಂತಿ ಭೇದಿ !!! ➤ ಓರ್ವ ಮಹಿಳೆ ಮೃತ್ಯು

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ರತ್ನಾಕರ ಶೆಟ್ಟಿ ಸುಬ್ರಹ್ಮಣ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಡಬ ಮೆಸ್ಕಾಂ ಜೆಇ ನಾಗರಾಜ್, ನೂಜಿಬಾಳ್ತಿಲ ಬಂಟ್ರ-ಕ್ಲಸ್ಟರ್ ಸಿ.ಆರ್.ಪಿ. ಗೋವಿಂದ ನಾಯ್ಕ್‌ ಭಾಗವಹಿಸಲಿದ್ದು ಉದ್ಯಮಿ ರೋಹಿತ್ ಬಿ.ಬಿ. ಸುಬ್ರಹ್ಮಣ್ಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ನಿವೃತ್ತ ಮುಖ್ಯಗುರುಗಳಾದ ತಮ್ಮಯ್ಯ ಗೌಡ ಸುಳ್ಯ-ಐತ್ತೂರು ಸಾಧಕರನ್ನು ಸನ್ಮಾನಿಸಲಿದ್ದು ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಗಣೇಶ್ ವೆಂಕಟಹಿತ್ಲು, ಯಕ್ಷಗಾನ ಕ್ಷೇತ್ರದಲ್ಲಿ ಕಡಬ ಶ್ರೀನಿವಾಸ್ ರೈ, ಹಾಗೂ ಭಿನ್ನ ಸಾಮಥರ್ಯ್‌ದ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕು.ದಿವ್ಯ ಬೆತ್ತೋಡಿ ಅವರನ್ನು ಸನ್ಮಾನಿಸಲಿದೆ ಹಾಗೂ ಮರ್ದಾಳ ವ್ಯಾಪ್ತಿಯ ಶಾಲೆಗಳಲ್ಲಿ ಕಳೆದ ವರ್ಷದ 7ನೇ ತರಗತಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

error: Content is protected !!
Scroll to Top