ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ 2600 ಕೋಟಿ ರೂ ಅವ್ಯವಹಾರ ► ಸಿಎಂ ಹಾಗೂ ಜಾರ್ಜ್ ವಿರುದ್ಧ ಮತ್ತೆ ದೂರು 

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.30. ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಸುಮಾರು 2000 ಕೋಟಿ ರೂಪಾಯಿ ಅವ್ಯವಹಾರ ಹಾಗೂ ವೈಟ್ ಟ್ಯಾಪಿಂಗ್ ನಲ್ಲಿ ಸುಮಾರು 600 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಬಿಜೆಪಿ ಮತ್ತೆ ಎರಡು ಪ್ರತ್ಯೇಕ ದೂರು ದಾಖಲಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್ ಆರ್ ರಮೇಶ್  2,600 ಕೋಟಿ ರೂಪಾಯಿ ಅವ್ಯವಹಾರದಲ್ಲಿ, ಸಿಎಂ ಹಾಗೂ ಜಾರ್ಜ್ ಬಿಬಿಎಂಪಿ ಕಾಮಗಾರಿಯಲ್ಲಿ 600 ಕೋಟಿ ರೂಪಾಯಿಯಷ್ಟು ಕಿಕ್ ಬ್ಯಾಕ್ ಪಡೆದಿರುವುದಾಗಿ ಆರೋಪಿಸಿದರು. ಅಲ್ಲದೇ ಬರೋಬ್ಬರಿ 3097 ಪುಟಗಳಷ್ಟು ದಾಖಲೆ ಬಿಡುಗಡೆ ಮಾಡಿದರು. ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ 400 ಕೋಟಿ ಹಾಗೂ ವೈಟ್ ಟ್ಯಾಪಿಂಗ್ ನಲ್ಲಿ 200 ಕೋಟಿ ಕಿಕ್ ಬ್ಯಾಕ್ ಪಡೆದಿರುವುದಾಗಿ ರಮೇಶ್ ಆರೋಪಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು 9,662 ಕೋಟಿ ರು, ಬಿಡುಗಡೆಯಾಗಿದೆ,  ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 4,878 ಕೋಟಿ ರು ಅನುದಾನದಲ್ಲಿ ಸಿದ್ದರಾಮಯ್ಯ ಮತ್ತು ಕೆ.ಜೆ ಜಾರ್ಜ್ 400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಕಮಿಷನ್ ಪಡೆದಿದ್ದಾರೆ ಎಂದು ದೂರಿದ್ದಾರೆ.

Also Read  ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ ➤ ಒಟ್ಟು 15 ಮಂದಿ ಮೃತ್ಯು.!

 

error: Content is protected !!
Scroll to Top