ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.30. ಐತ್ತೂರು ಗ್ರಾಮ ಪಂಚಾಯತ್ ಜಮಾಬಂದಿ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಕೆ.ಯವರ ಅಧ್ಯಕ್ಷತೆಯಲ್ಲಿ  ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ತಾಲೂಕು ಯೋಜನಾಧಿಕಾರಿ ಗಣಪತಿ ಭಟ್ ಜಮಾಬಂದಿ ಸಭೆಯ ಅಧಿಕಾರಿಯಾಗಿದ್ದರು. 2016-17ನೇ ವಾರ್ಷಿಕ ಲೆಕ್ಕಪತ್ರ ಹಾಗೂ ವಿವಿಧ ದಾಖಲೆ ಪರಿಶೀಲನೆಯ ಕುರಿತು ಜಮಾಬಂದಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಬಳಿಕ ವಿವಿಧ ಕಾಮಗಾರಿಗಳಾದ ಬಜಕೆರೆ ರಸ್ತೆ ಕಾಂಕ್ರೀಟೀಕರಣ, ಭ್ರಾಂತಿಕಟ್ಟೆ-ಕೋಡಿಂಕಿರಿ ರಸ್ತೆಯ ಬಜಕೆರೆ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ, ಹಾಗೂ ಕಲ್ಲಾಜೆ-ಅಂತಿಬೆಟ್ಟು ರಸ್ತೆಯ ಕಲ್ಲಾಜೆ ಎಂಬಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಯಿತು.

Also Read  ಕಳಾರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ➤10 ಲಕ್ಷ ರೂ. ಅನುದಾನ


ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ಪಿ.ಪಿ. ಮಥ್ಯಾಸ್, ಯೂಸುಫ್ ಎಂ.ಪಿ., ಇಸ್ಮಾಯಿಲ್ ಎಂ.ಎಚ್., ಮುತ್ತುಕುಮಾರಿ, ಉಪಸ್ಥಿತರಿದ್ದರು. ಶಿಬು ಕೆ. ವರದಿ ಮಂಡಿಸಿದರು. ಪಂಚಾಯತ್
ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್‌ ರೊಡ್ರಿಗೆಸ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ದೇವಿಕಾ, ತಾರನಾಥ ಸಹಕರಿಸಿದರು.

error: Content is protected !!
Scroll to Top