(ನ್ಯೂಸ್ ಕಡಬ) newskadaba,ಉಚ್ಚಿಲ ಜು.06: ಸುಮಾರು 32 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಬಾಲಾಲಯದಲ್ಲಿಯ ಶ್ರೀ ಮಹಾಲಕ್ಷಿಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯ ರವರು ಪೂಜೆ ಸಲ್ಲಿಸಿ ಡಿಕೆ ಶಿವಕುಮಾರ್ ರವರಿಗೆ ಪ್ರಸಾದ ವಿತರಿಸಿದರು.ದೇವಳದ ಆಡಳಿತ ಮಂಡಳಿಯ ವತಿಯಿಂದ ಡಿಕೆ ಶಿವಕುಮಾರ್ರವರನ್ನು ಸನ್ಮಾನಿಸಲಾಯಿತು.