(ನ್ಯೂಸ್ ಕಡಬ) newskadaba,ಮಂಗಳೂರು ಜು.02: ತುಳುಭಾಷೆಯ ಪ್ರಪ್ರಥಮ ಆನ್ಲೈನ್ ಡಿಕ್ಷನರಿ ಇಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಇಂದು ಅನಾವರಣಗೊಂಡಿತು.
ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಡಿಕ್ಷನರಿ ಅನಾವರಣಗೊಳಿಸಿ ಮಾತನಾಡಿ, ಕೊಪ್ಪರಿಗೆ ಡಿಕ್ಷನರಿಯಲ್ಲಿ ತುಳು ಭಾಷೆಯ 1200 ಪದಗಳಿಗಸ ಉಚ್ಚಾರ, ಅರ್ಥ ಸಹಿತ ವಿವರಿಸಿ ತಿಳಿದಲಾಗಿದೆ. ಅಲ್ಲದೆ ಇಂದಿನ ತಂತ್ರಜ್ಞಾನಕ್ಕೆ ಹೊಂದಾಣಿಕೆಯಾಗುವಂತೆ ಈ ಡಿಕ್ಷನರಿ ಆನ್ಲೈನ್ ಮೂಲಕ ಲಭ್ಯವಾಗುತ್ತಿರುವುದು ನಿಜವಾಗಿಯೂ ಸಂತೋಷದ ವಿಚಾರ ಎಂದು ತಿಳಿಸಿದರು.ಈ ಸಂದರ್ಭ ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಯಕ್ಷಧ್ರುವ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.