(ನ್ಯೂಸ್ ಕಡಬ) newskadaba,ಕೊಡಗು ಜೂ.30: ಜುಲೈ 5 ರವರೆಗೆ ಲಾಕ್ ಡೌನ್ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ಇಲ್ಲ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು, ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ತಿಳಿಸಿದ್ದಾರೆ.
ಲಾಕ್ ಡೌನ್ ದಿನಗಳಲ್ಲಿಯೂ ಪ್ರವಾಸಿಗರು ಜಿಲ್ಲೆಗೆ ಬರುತ್ತಿರುವ ದೂರುಗಳು ಬಂದಿದೆ. ಜಿಲ್ಲೆಯಲ್ಲಿ ಜುಲೈ 5 ರವರೆಗೆ ಲಾಕ್‌ಡೌನ್ ಇರುತ್ತದೆ. ಅಲ್ಲಿಯವರೆಗೆ ಕೊಡಗಿನಲ್ಲಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರ ಕೂಡ ಪ್ರವಾಸಿಗರಿಗೆ ಅವಕಾಶ ನೀಡಿದ ಮಡಿಕೇರಿಯ ಹೋಂಸ್ಟೇ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಹೊರಜಿಲ್ಲೆಯಿಂದ ಪ್ರವಾಸಿಗರ ಎಂಟ್ರಿಗೆ ಕೊಡಗು ಜಿಲ್ಲೆಯಲ್ಲಿ ಅವಕಾಶ ಇಲ್ಲ.ಯಾವಾಗ ಅವಕಾಶ ನೀಡಬೇಕೆಂದು ರಾಜ್ಯ ಸರಕಾರವೇ ನಿರ್ದೇಶನ ನೀಡುತ್ತದೆ ಎಂದು ಈಶ್ವರ ಕುಮಾರ್ ಖಂಡು ತಿಳಿಸಿದ್ದಾರೆ.