(ನ್ಯೂಸ್ ಕಡಬ) newskadaba,ಮುಂಬೈ ಜೂ.30: ಹಿರಿಯ ನಟ ನಾಸೀರುದ್ದೀನ್ ಶಾ ನ್ಯುಮೋನಿಯಾ ತೊಂದರೆಯಿಂದಾಗಿ ಮುಂಬೈನ ಹಿಂದೂಜ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ನಾಸೀರುದ್ದೀನ್ ಶಾ ಅವರು ಎರಡು ದಿನಗಳ ಕಾಲ ಮೆಡಿಕಲ್ ಅಬ್ಸರ್ವೇಷನ್ನಲ್ಲಿ ಇರಬೇಕೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶಾ ಅವರ ಶ್ವಾಸಕೋಶದಲ್ಲಿ ಒಂದು ಪ್ಯಾಚ್ ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಯಿತು. ಅವರ ಆರೋಗ್ಯ ಸ್ಥಿರವಾಗಿದೆ. ಜೊತೆಗೆ ಶಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.ನಾಸೀರುದ್ದೀನ್ ಶಾ ಖ್ಯಾತ ನಟರಲ್ಲಿ ಒಬ್ಬರು. ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮ್ಮ 70ನೇ ವಯಸ್ಸಿನಲ್ಲೂ ಷಾ ಅವರು ಅಭಿನಯಿಸುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.