ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಕೊರೊನಾ ಸೋಂಕಿಗೆ ಬಲಿ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.30:ಬಹುಭಾಷಾ ನಟಿ ಕವಿತಾ ಅವರ ಮಗ, ಪತಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.ಕೇವಲ 15 ದಿನಗಳಲ್ಲಿ ಗಂಡ ಮತ್ತು ಮಗ ಇಬ್ಬರೂ ಸಾವನ್ನಪ್ಪಿರುವುದು ಕವಿತಾ ಅವರಿಗೆ ದಿಗ್ಭ್ರಮೆ ಮೂಡಿಸಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ ಅವರು ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ದುಃಖದ ಮಡುವಿನಲ್ಲಿದ್ದಾರೆ.ಮಗ ಸಂಜಯ್ ರೂಪ್ ಎರಡು ವಾರಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೇ ಸಂದರ್ಭದಲ್ಲಿ ಕವಿತಾ ಪತಿಗೂ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

error: Content is protected !!

Join the Group

Join WhatsApp Group