(ನ್ಯೂಸ್ ಕಡಬ) newskadaba,ಮಂಗಳೂರು ಜೂ.27: ನಗರದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು, ಮಂಗಳೂರು ಎಲ್ಲೆಡೆ ಸ್ತಬ್ಧವಾಗಿದೆ. ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಯಾರೂ ಅನಗತ್ಯ ಸಂಚಾರ ನಡೆಸದಂತೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ.
ವಾರಾಂತ್ಯ ಕರ್ಫ್ಯೂ ಸಂದರ್ಭ ಹಾಲು, ಮೆಡಿಕಲ್ ಹಾಗೂ ಸರಕಾರಿ ಕಚೇರಿ ಹೊರತುಪಡಿಸಿ ಮಿಕ್ಕೆಲ್ಲವೂ ಬಂದ್ ಮಾಡಲು ಜಿಲ್ಲಾಡಳಿತ ಆದೇಶಿಸಿತ್ತು. ಜನತೆಯಿಂದ ಈ ಆದೇಶಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ರಸ್ತೆಯಲ್ಲಿ ವಾಹನಗಳ, ಜನರ ಓಡಾಟವಿಲ್ಲದೆ ಎಲ್ಲಡೆ ಮಂಗಳೂರು ಸ್ತಬ್ಧವಾಗಿದೆ.