ದಕ್ಷಿಣ ಕನ್ನಡ ಜಿಲ್ಲೆಗೆ ‘ಡೆಲ್ಟಾ’ಪ್ಲಸ್ ಭೀತಿ..?!!

(ನ್ಯೂಸ್ ಕಡಬ) newskadaba,ಮಂಗಳೂರು ಜೂ.27: ಕೇರಳದ ಕರಾವಳಿ ಭಾಗಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೆರೆಯ ದಕ್ಷಿಣಕನ್ನಡ ಜಿಲ್ಲೆಗೂ ಭೀತಿ ಹೆಚ್ಚಾಗಿದೆ.

ಕೇರಳದಿಂದ ಪ್ರತಿನಿತ್ಯ ಸಾವಿರಾರು ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರ, ಉದ್ಯೋಗಕ್ಕಾಗಿ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಭೀತಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.ಈ ವಾರದ ವೀಕೆಂಡ್ ಕರ್ಪ್ಯೂ ಜಾರಿ ಇದ್ದ ಕಾರಣ ಗಡಿ ಭಾಗದಲ್ಲಿ ಹೆಚ್ಚಿನ ವಾಹನ ಓಡಾಟ ಇರಲಿಲ್ಲ. ಆದರೂ ಯಾವೊಂದು ತಪಾಸಣೆಯೂ ಇರಲಿಲ್ಲ.ಡೆಲ್ಟಾ ಪ್ಲಸ್ ಸೋಂಕಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

error: Content is protected !!

Join the Group

Join WhatsApp Group