ಸಲಿಂಗಕಾಮಕ್ಕೆ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸುತಿದ್ದ ಮುಖ್ಯ ಶಿಕ್ಷಕ ಬಂಧನ

(ನ್ಯೂಸ್ ಕಡಬ) newskadaba,ನೆಲಮಂಗಲ ಜೂ.26: ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿಯ ಜೊತೆ ವಿಕೃತಿ ಮೆರೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ನಡೆದಿದೆ.

ಮುಖ್ಯ ಶಿಕ್ಷಕ ಎಸ್.ರಂಗನಾಥ್ ಬಂಧಿತ ಆರೋಪಿ. ಈತ ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಟ್ಟೆ ಬಿಚ್ಚಿಸುತ್ತಿದ್ದ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿಕ್ಷಕ ರಂಗನಾಥ್, ಒತ್ತಾಯದ ಸಲಿಂಗಕಾಮ ಐಪಿಸಿ 377 ಹಾಗೂ ಜೀವ ಬೆದರಿಕೆ ಅಡಿ 506 ಆರೋಪದಡಿ ಪ್ರಕರಣ ಎಫ್ ಐಆರ್ ದಾಖಲಾಗಿದೆ. ಕೋವಿಡ್ ನಿಂದಾಗಿ 7 ವಿಶೇಷ ಮಕ್ಕಳನ್ನು ಮಾತ್ರ ಶಾಲೆಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಉಳಿದವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಕಾರ್ಯದರ್ಶಿ ದೂರಿನಲ್ಲಿ ತಿಳಿಸಿದ್ದಾರೆ.

Also Read  ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ➤ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​​​​ ವ್ಯವಸ್ಥೆ…

ಇತ್ತಿಚ್ಚೆಗಷ್ಟೆ ಊರಿಗೆ ಹೋದಾಗ ಘಟನೆ ಬಗ್ಗೆ ತಾಯಿಗೆ ಆ ಬಾಲಕ ತಿಳಿಸಿದ್ದ. ಬಳಿಕ ತಾಯಿ ಶಾಲಾ ಆಡಳಿತ ಮಂಡಳಿಗೆ ಹೇಳಿದ್ದರು ಎನ್ನಲಾಗಿ ವಿಚಾರಣೆ ಬಳಿಕ ಆಂತರಕ ತನಿಖೆ ನಡೆಸಿದ್ದ ಶಾಲಾ ಆಡಳಿತ ಮಂಡಳಿ ರಂಗನಾಥ್ ಸಲಿಂಗ ಕಾಮದ ಕೃತ್ಯ ಆರೋಪ ಸಾಬೀತಾಗಿತ್ತು. ಕೂಡಲೇ ಡಾಬಸ್ ಪೇಟೆ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿ ಆರೋಪಿ ರಂಗನಾಥ್ ನನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ

error: Content is protected !!
Scroll to Top