ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ಮೊಗ್ರ ಗ್ರಾಮಸ್ಥರು ➤ ಗ್ರಾಮಸ್ಥರ ಹಣದಿಂದಲೇ ಸಿದ್ಧವಾಯ್ತು ಸೇತುವೆ

(ನ್ಯೂಸ್ ಕಡಬ) newskadaba,ಸುಬ್ರಹ್ಮಣ್ಯ ಜೂ.26: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿಯಲ್ಲಿ ಜನರೇ ಸುಮಾರು 1 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಲು ಸಂಕವನ್ನು ಗುರುವಾರದಿಂದ ಜನರ ಬಳಕೆಗೆ ಲಭ್ಯವಾಗಿದೆ.

ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಗ್ರಾಮಸ್ಥರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಜನಪ್ರತಿನಿಧಿಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ‘ಜನರಿಂದ ಜನರಿಗಾಗಿ ಜನರೇ ಗ್ರಾಮ ಸೇತು’ ಎಂಬ ಹೆಸರಿನಲ್ಲಿ ಗ್ರಾಮಸ್ಥರೇ ಕಾಲು ಸಂಕ ನಿರ್ಮಿಸಿದ್ದಾರೆ. ತೂಗುಸೇತುವೆಗಳ ತಜ್ಞ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಊರ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನಸಹಾಯ ಮಾಡಿದ್ದಾರೆ. ಪರವೂರಿನ ದಾನಿಗಳು, ಖಾಸಗಿ ಕಂಪನಿಗಳೂ ನೆರವು ನೀಡಿದೆ. ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ತಲೆಯೆತ್ತಿದೆ.

Also Read   ಪ್ರವಾಸಿಗರನ್ನು ಸೆಳೆಯುತ್ತಿದೆ ಮಳೆಗಾಲದಲ್ಲಿ ಮಣಿಪಾಲದ ಅರ್ಬಿ ಜಲಪಾತ

ತಮ್ಮೂರಿನ ಹೊಳಗೆ ಶಾಶ್ವತ ಸೇತುವೆ ಬೇಕೆಂದು ಶಾಸಕ-ಸಚಿವರುಗಳಿಗೆ ಮನವಿ ಸಲ್ಲಿಸಿದರು. ಆದರೆ, ಇದು ಪ್ರಯೋಜನಕಾರಿಯಾಗದೇ ನೇರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.ಪ್ರಧಾನಿ ಕಾರ್ಯಾಲಯದಿಂದ ಸಮಸ್ಯೆ ಬಗೆಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ ಸೂಚನೆ ಬಂದಿತ್ತು. ಆದರೆ, ಪ್ರಧಾನಿಯೇ ಸೂಚಿಸಿದರೂ ಇಚ್ಛಾ ಶಕ್ತಿಯನ್ನು ಅಧಿಕಾರಿಗಳು ಮೆರೆದಿಲ್ಲ. ಹೀಗಾಗಿ ಅಧಿಕಾರಿಗಳನ್ನು ಇನ್ನು ಕಾದರೆ ಪ್ರಯೋಜನವಿಲ್ಲ ಅಂತ ಊರಿನ ಜನರೇ ಸೇತುವೆ ನಿರ್ಮಿಸಿದ್ದಾರೆ.

error: Content is protected !!
Scroll to Top