(ನ್ಯೂಸ್ ಕಡಬ) newskadaba,ಮಂಗಳೂರು ಜೂ.24: ಪಶ್ಚಿವ ಘಟ್ಟದ ತಪ್ಪಲಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಾದ ಬಾಂಜಾರು ಮಲೆಯಲ್ಲಿ 180ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 40 ಕಿ. ಮೀ. ದೂರವಿರುವ ಬಾಂಜಾರುಮಲೆಯಲ್ಲಿ ಎರಡೂ ಅಲೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಾಣಿಸಿಕೊಂಡಿಲ್ಲ.ಊರಿಗೆ ಬೇಕಾದ ಅಗತ್ಯ ಸಾಮಾನುಗಳನ್ನು ಊರಿನ ಇಬ್ಬರು ವಾರದ ಒಂದು ದಿನ ಪೇಟೆಯಿಂದ ತಂದು ಕೊಡುತ್ತಾರೆ.
ಊರಿಂದ ಯಾರೂ ಹೊರಗೆ ಹೋಗದೆ, ಊರಿಗೆ ಹೊರಗಿನಿಂದ ಯಾರೂ ಬರದ ಹಾಗೆ ಅಖಿಲಿತ ನಿಯಮ ಮಾಡಿ ಕೊರೊನಾ ವಿರುದ್ಧ ಜನರು ಒಗ್ಗಟ್ಟಿನ ಹೋರಾಟ ಮಾಡಿದ್ದರು.ಬಾಂಜಾರುಮಲೆ ಜನರ ಕೊರೊನಾ ಜಾಗೃತಿಯ ಬಗ್ಗೆ ಜಿಲ್ಲಾಡಳಿತ ಮೆಚ್ಚುಗೆ ಸೂಚಿಸಿತ್ತು. ಜಿಲ್ಲೆಯ ಮಾದರಿ ಗ್ರಾಮ ಬಾಂಜಾರುಮಲೆ ಅಂತಾ ಹೇಳಿತ್ತು. ಈ ಸಂದರ್ಭದಲ್ಲಿ ಗ್ರಾಮದ ಜನರಿಗೆ ವಿಶೇಷ ಉಡುಗೊರೆ ಘೋಷಿಸಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಹಳ್ಳಿಗೇ ಹೋಗಿ ಲಸಿಕೆ ನೀಡುತ್ತೇವೆ. ಊರಿನ ಜನರು ಯಾರೂ ಲಸಿಕೆಗಾಗಿ ಹೊರಗೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.ಕೊಟ್ಟ ಮಾತನ್ನು ಜಿಲ್ಲಾಧಿಕಾರಿಗಳು ಉಳಿಸಿಕೊಂಡಿದ್ದು, ಆರೊಗ್ಯ ಇಲಾಖಾ ಸಿಬ್ಬಂದಿಗಳು ಬಾಂಜಾರುಮಲೆಯನ್ನು ತಲುಪಿ ಲಸಿಕೆ ಹಂಚಿಕೆ ಮಾಡಿದ್ದಾರೆ