ಉಡುಪಿ:ನಿರುದ್ಯೋಗ ಸಮಸ್ಯೆಯಿಂದ ನೊಂದ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba,ಉಡುಪಿ ಜೂ.24: ನಿರುದ್ಯೋಗ ಸಮಸ್ಯೆಯಿಂದ ಮನನೊಂದ ಯುವಕನೊಬ್ಬ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಕ್ಕಿಕಟ್ಟೆ- ಇಂದಿರಾನಗರದಲ್ಲಿ ನಡೆದಿದೆ.


ಮೃತ ಯುವಕನನ್ನು ಇಂದಿರಾನಗರ ನಿವಾಸಿ ಧನಂಜಯ್ ಎಸ್(36 ) ಎಂದು ಗುರುತಿಸಲಾಗಿದೆ. ಲಾಕ್‌ಡೌನ್ ತುರ್ತು ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top