ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ

(ನ್ಯೂಸ್ ಕಡಬ) newskadaba,ಗಾಂಧಿನಗರ ಜೂ.23: ಚಿನ್ನದ ಮನುಷ್ಯ ಎಂದು ಹೆಸರು ಪಡೆದಿರುವ ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಪಿ ಪಟೇಲ್ ಗುಜರಾತಿನ ಅಹಮದಾಬಾದ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಟುಂಬದ ಜೊತೆ ನೆಡದ ಗಲಾಟೆ ಬಳಿಕ ತಾನೇ ಕುತ್ತಿಗೆ ಹಿಸುಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲಿಸ್ ಮೂಲಗಳಿಂದ ತಿಳಿದುಬಂದಿದೆ. ರಾಜಿಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕುಂಜಾಲ್ ಪಟೇಲ್, ದರಿಯಾಪುರ್ ಕ್ಷೇತ್ರದಿಂದ ಈ ಮುಂಚೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದನು. ಕೆಜಿಗಟ್ಟಲೇ ಚಿನ್ನಾಭರಣ ಧರಿಸಿದ್ದ ಕುಂಜಾಲ್ ಪಟೇಲ್ ಫೋಟೋ ವೈರಲ್ ಆಗಿ ಖ್ಯಾತಿಗಳಿಸಿದ್ದನು.ಆತ್ಮಹತ್ಯೆ ಸಂಬಂಧ ಅನುಮಾನವು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಮಧುಪುರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!