ವಿಷ ಕುಡಿದು ಪ್ರಿಯಕರನ ತೊಡೆ ಮೇಲೇ ಪ್ರಾಣ ಬಿಟ್ಟ ವಿವಾಹಿತೆ

(ನ್ಯೂಸ್ ಕಡಬ) newskadaba,ವಿಜಯಪುರ ಜೂ.23: ಬೇರೆ ಮದುವೆಯಾಗಿದ್ದರೂ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಇದ್ದರೂ ಒಟ್ಟಿಗೇ, ಸತ್ತರೂ ಒಟ್ಟಿಗೇ ಎಂದು ನಿರ್ಧರಿಸಿದ್ದರು. ಅದೇ ಕಾರಣಕ್ಕೆ ದುಡುಕಿ ತಪ್ಪಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪ್ರೀತಿ ಕುರುಡು ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. 3 ಮತ್ತು 6 ಮಕ್ಕಳಿರುವ ವಿವಾಹಿತರಿಬ್ಬರು ತಮ್ಮ ಮಕ್ಕಳ ಬಗ್ಗೆಯೂ ಯೋಚಿಸದೆ ತಮ್ಮ ಪ್ರೀತಿಗಾಗಿ ವಿಷ ಸೇವಿಸಿದ್ದಾರೆ.

ಇಬ್ಬರಿಗೂ ಬೇರೆಯವರ ಜೊತೆ ಮದುವೆಯಾಗಿತ್ತು. ಹೀಗಾಗಿ, ತಮ್ಮ ಪ್ರೀತಿಯನ್ನು ಈ ಸಮಾಜ ಒಪ್ಪುವುದಿಲ್ಲ ಎಂದು ವಿಷಯ ಕುಡಿದು ಸಾಯಲು ನಿರ್ಧರಿಸಿದ್ದರು. ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಮಹಿಳೆ ತನ್ನ ಪ್ರೇಮಿಯ ಜೊತೆ ವಿಷ ಸೇವಿಸಿ ಆತನ ತೊಡೆಯ ಮೇಲೇ ಸಾವನ್ನಪ್ಪಿದ್ದಾಳೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.ಸಾಯಬೇಕೆಂದು ನಿರ್ಧರಿಸಿದ್ದ ಜೋಡಿ ಗುಡ್ಡದ ತುದಿಗೆ ಹೋಗಿದ್ದರು. ಅಲ್ಲಿ ವಿಷ ಕುಡಿದ ಅವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಕುಸಿದಿದ್ದಾರೆ. ಆದರೆ, ಹೆಚ್ಚು ವಿಷ ಸೇವಿಸಿದ್ದ ಯುವತಿ ತನ್ನ ಪ್ರೇಮಿಯ ಕಾಲಿನ ಮೇಲೆ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ.ಪ್ರಿಯಕರ ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ

error: Content is protected !!
Scroll to Top