(ನ್ಯೂಸ್ ಕಡಬ) newskadaba,ನವದೆಹಲಿ ಜೂ.21: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಭಾರತೀಯ ಯೋಧರು ಹಿಮಾಲಯ ಹಾಗೂ ಮರುಭೂಮಿಯಲ್ಲಿ ಯೋಗ ಮಾಡಿ ಗಮನ ಸೆಳೆದರು.ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಅಧಿಕಾರಿಯೊಬ್ಬರು ಲಡಾಖ್‌ನ 18,000 ಅಡಿ ಎತ್ತರದ ಉಪ ಶೂನ್ಯ ತಾಪಮಾನ ಪ್ರದೇಶದಲ್ಲಿ ಸೂರ್ಯ ನಮಸ್ಕಾರ ಮಾಡಿ ವಿಶ್ವವನ್ನು ಆಕರ್ಷಿಸಿದರು. ಅವರು ಐಟಿಬಿಪಿಯ ಹಿಮ್‌ವೀರ್ ಯೂನಿಟ್‌ನ ಅಧಿಕಾರಿಯಾಗಿದ್ದು, ಘನೀಕರಿಸುವ ಚಳಿಯಲ್ಲಿ ಯೋಗಾಭ್ಯಾಸ ಮಾಡಿದ್ದಾರೆ.
ಇನ್ನು, ಗಡಿ ಭದ್ರತಾ ಪಡೆಯ ಯೋಧರು ರಾಜಸ್ಥಾನದ ಭಾರತ – ಪಾಕಿಸ್ತಾನ ಗಡಿಯ ಮರುಭೂಮಿಯಲ್ಲಿ ಯೋಗಾಭ್ಯಾಸ ನಡೆಸಿದರೆ, ಸಿಆರ್‌ಪಿಎಫ್ 150 ಮತ್ತು 241 ಬೆಟಾಲಿಯನ್‌ಗಳ ಯೋಧರು ಮತ್ತು ಕೋಬ್ರಾ 206 ಬೆಟಾಲಿಯನ್‌ನ ಸೈನಿಕರು ಸುಖ್ಮಾದ ನಕ್ಸಲ್ ಪೀಡಿತ ಗ್ರಾಮ ಮಿನ್ಪಾದಲ್ಲಿ ಯೋಗಾಸನ ಮಾಡಿ ಯೋಗದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದರು.