ತಾತ ಆಗಲಿದ್ದಾರೆ ಎಚ್‍ಡಿ ಕುಮಾರಸ್ವಾಮಿ ➤ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.21: ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಅದು ಅಂತ ಯೋಚಿಸ್ತಿದ್ದೀರಾ? ಹೌದು ನಟ ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗಲಿದ್ದಾರೆ.

ಇಂದು ನಿಖಿಲ್ ಮನದರಸಿ ರೇವತಿಯವರ ಹುಟ್ಟುಹಬ್ಬವಿದ್ದು, ಪ್ರೀತಿಯ ಪತ್ನಿಗೆ ನಿಖಿಲ್ ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಇದೀಗ ರೇವತಿ ಅವರಿಗೆ ಈಗ ಐದು ತಿಂಗಳಾಗಿದೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ.ಇಂದು ರೇವತಿ ಅಂಗವಿಕಲರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂಗವಿಕಲರಿಗೆ ಬಟ್ಟೆ ಹಾಗೂ ಸಿಹಿ ನೀಡುವ ಮೂಲಕ ನಿಖಿಲ್​ ರೇವತಿ ಸಂಭ್ರಮಿಸಿದ್ದಾರೆ.

Also Read  ತಹಶೀಲ್ದಾರ್ ಬಳಿ ಇಲ್ಲ ತಾಲೂಕು ವ್ಯಾಪ್ತಿಯ ಕೊರೋನಾ ಅಂಕಿ ಅಂಶ..! ಅಧಿಕಾರಿಗಳೇ ನಿರ್ಲಕ್ಷ್ಯಿಸಿದರೆ ಸಿಬಂದಿಗಳನ್ನು ಕೇಳುವವರು ಯಾರು?

error: Content is protected !!
Scroll to Top