ಸಸಿಹಿತ್ಲು ಶಾಂಭವಿ ನದಿ ತೀರದಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba,ಸಸಿಹಿತ್ಲು ಜೂ.21: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಹಿಂದೂ ರುದ್ರಭೂಮಿ ಬಳಿಯ ಶಾಂಭವಿ ನದಿ ತೀರದಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಸಸಿಹಿತ್ಲು ಹಿಂದೂ ರುದ್ರಭೂಮಿ ಬಳಿಯ ಶಾಂಭವಿ ನದಿ ತೀರದಲ್ಲಿ ಒಣಗಿದ ಗಿಡ ಗಂಟಿ ಹಾಗೂ ಕಸಕಡ್ಡಿ ನಡುವೆ ಸುಮಾರು 35 ವರ್ಷ ಪ್ರಾಯದ ವ್ಯಕ್ತಿಯ ಶವ ಸಿಲುಕಿಕೊಂಡಿರುವುದು ಕಂಡುಬಂದಿದ್ದು ಈ ಸಂದರ್ಭ ಸ್ಥಳದಲ್ಲಿದ್ದ ಶರತ್ ಅಮೀನ್ ಮತ್ತು ಪುರುಷೋತ್ತಮ ಸಾಲ್ಯಾನ್ ಮತ್ತಿತರರು ಧಾವಿಸಿ ಒಣಗಿದ ಗಿಡಗಂಟಿ ಗಳಲ್ಲಿ ಶವವನ್ನು ದೋಣಿ ಮೂಲಕ ದಡಕ್ಕೆ ಸೇರಿಸಿದ್ದಾರೆ.ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

error: Content is protected !!

Join the Group

Join WhatsApp Group