ಬಿಗ್ ಬಾಸ್ ಕನ್ನಡ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್ ➤ ಜೂ.23ಕ್ಕೆ ಮಹಾಸಂಚಿಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.21: ಕೊರೋನಾ 2ನೇ ಅಲೆ ತೀವ್ರವಾಗಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಇದೇ ಬುಧವಾರ (ಜೂ.23) ಪುನರಾರಂಭವಾಗುತ್ತಿದೆ.

ಬಿಗ್ ಬಾಸ್ ಸೀಸನ್ ನ್ನು ಅರ್ಧಕ್ಕೆ ಸ್ಥಗಿತಗೊಳಿಸಿದಾಗ ಅದನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಮತ್ತು ಮನೆಯೊಳಗಿದ್ದ 12 ಮಂದಿ ಸ್ಪರ್ಧಿಗಳಿಗೆ ಬೇಸರವಾಗಿತ್ತು. ಇದೀಗ ಕೊರೋನಾ ಸೋಂಕಿನ ಎರಡನೇ ಅಲೆ ಕಡಿಮೆಯಾಗಿ ಸರ್ಕಾರ ನಿರ್ಬಂಧವನ್ನು ಸಡಿಲಗೊಳಿಸುತ್ತಿದ್ದಂತೆ ಕಲರ್ಸ್ ಕನ್ನಡ ವಾಹಿನಿ ರಿಯಾಲಿಟಿ ಶೋವನ್ನು ಮತ್ತೆ ಆರಂಭಿಸುತ್ತಿದೆ. ಇದನ್ನು ಎರಡನೇ ಇನ್ಸಿಂಗ್ಸ್ ಎಂದು ವಾಹಿನಿ ಕರೆದಿದೆ.

error: Content is protected !!

Join the Group

Join WhatsApp Group