ಕೋವಿಡ್​ ಸಂತ್ರಸ್ತರಿಗೆ 4 ಲಕ್ಷ ಪರಿಹಾರ ನೀಡಲು ಅಸಾಧ್ಯ ➤ಸುಪ್ರೀಂ ಕೋರ್ಟ್​ಗೆ ಕೇಂದ್ರ ಮಾಹಿತಿ

(ನ್ಯೂಸ್ ಕಡಬ) newskadaba,ನವ ದೆಹಲಿ ಜೂ. 20: ಮಾರಕ ಕೊರೋನಾ ವೈರಸ್​ನಿಂದ ಮೃತಪಟ್ಟವರಿಗೆ 4 ಲಕ್ಷ ರೂಪಾಯಿ ಪರಿಹಾರವನ್ನು ಪಾವತಿಸಲಾಗುವುದಿಲ್ಲ. ಏಕೆಂದರೆ ಇದು ವಿಪತ್ತು ಪರಿಹಾರ ನಿಧಿಗಳನ್ನು ಖಾಲಿ ಮಾಡುತ್ತದೆ ಮತ್ತು COVID-19 ರ ಭವಿಷ್ಯದ ಅಲೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಗಳ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಇಂದು ಅಫಿಡವಿಟ್​ ಸಲ್ಲಿಸಿದೆ.

 

ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಕ್ ಕನ್ಸಾಲ್, “ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 12 ಅನ್ನು ಉಲ್ಲೇಖಿಸಿ ಇದರ ಅಡಿಯಲ್ಲಿ ವಿಪತ್ತು ಪೀಡಿತ ವ್ಯಕ್ತಿಗಳಿಗೆ ಕನಿಷ್ಟ ಪರಿಹಾರ ನೀಡಬೇಕು” ಎಂದು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ ನೀಡಿತ್ತು. ಅದರಂತೆ ಕೇಂದ್ರ ಸರ್ಕಾರ ಇಂದು ಹರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಫಿಡವಿಟ್ ಸಲ್ಲಿಸಿದೆ.

error: Content is protected !!
Scroll to Top