ಮತ್ತೆ ಆರೋಗ್ಯದಲ್ಲಿ ಏರುಪೇರು ► ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು

(ನ್ಯೂಸ್ ಕಡಬ) newskadaba.com ಉಡುಪಿ, ಅ.26. ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಗಳಿಗೆ  ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿಂಗಳ ಹಿಂದೆ ಹರ್ನಿಯಾ ಆಪರೇಷನ್ ಗೆ ಒಳಗಾಗಿದ್ದ ಶ್ರೀಗಳು ಇದೀಗ ಮತ್ತೆ ಕೆಎಂಸಿಗೆ ದಾಖಲಾಗಿದ್ದಾರೆ. ದಾಖಲಾದ ವಿಶ್ವೇಶತೀರ್ಥರನ್ನು, ಸ್ಕ್ಯಾನಿಂಗ್ ಗೆ ಒಳಪಡಿಸಲಾಯ್ತು. ಎರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವ ಸಾಧ್ಯತೆಯಿದೆ. ಸ್ಕಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿರುವ ವೈದ್ಯರು ತಪಾಸಣೆ ನಡೆಸಿದ್ದಾರೆ.

ರಾತ್ರಿಯ ಪೂಜೆ ಪೂರೈಸಿ, ಕೆಎಂಸಿ ಆಸ್ಪತ್ರೆಗೆ ತೆರಳಿರುವ ಸ್ವಾಮೀಜಿ ಅನುಷ್ಟಾನಗಳನ್ನೂ ಪೂರೈಸಿದ್ದಾರೆ. ಸ್ವಾಮೀಜಿ ಆರೋಗ್ಯವಾಗಿದ್ದಾರೆ, ಭಕ್ತರಿಗೆ ಆತಂಕ ಬೇಡ ಎಂದು ಉಡುಪಿ ಕೃಷ್ಣ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಪರೇಶನ್ ನಂತರ ಕೂಡಾ ಹೊಟ್ಟೆ ನೋವು ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Also Read  ಕಟೀಲು ದೇಗುಲ ಸೀಲ್‌ಡೌನ್ ಆಗಿಲ್ಲ ➤ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಆಡಳಿತ ಮಂಡಳಿ ಮನವಿ

 

error: Content is protected !!
Scroll to Top