ಮಾಣಿ: ರಸ್ತೆ ಬದಿ ಹೊಂಡಕ್ಕೆ ಉರುಳಿದ ಯಂತ್ರ ಸಾಗಾಟ ಲಾರಿ

(ನ್ಯೂಸ್ ಕಡಬ) newskadaba,ಬಂಟ್ವಾಳ ಜೂ.19: ಚಾಲಕನ ನಿಯಂತ್ರಣ ಕಳೆದುಕೊಂಡು ಯಂತ್ರ ಸಾಗಾಟ ಮಾಡುತ್ತಿದ್ದ ಲಾರಿ, ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಇಂದು ಮಧ್ಯಾಹ್ನ ನಡೆದಿದೆ.

ಉಪ್ಪಿನಂಗಡಿ ಕಡೆಯಿಂದ ಮಂಗಳೂರಿನ ಬೈಕಂಪಾಡಿಗೆ ಸಿಮೆಂಟ್ ಮಿಕ್ಸರ್ ಯಂತ್ರವನ್ನು ಸಾಗಾಟ ಮಾಡುತ್ತಿದ್ದ ಲಾರಿ, ಮಾಣಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ.ಮುಂಭಾಗದಿಂದ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಈ ಘಟನೆ ನಡೆದಿದೆ.

Also Read  ಮಂಗಳೂರು: ಬಡ ಮಕ್ಕಳ ಆನ್‌ ಲೈನ್‌ ತರಗತಿಗೆ ಸಹಾಯಹಸ್ತ ಚಾಚಿದ ಯುವ ವಿದ್ಯಾರ್ಥಿಗಳು

error: Content is protected !!
Scroll to Top