ರಾಜ್ಯದಲ್ಲಿ ಇಂದು 5,986 ಕೊರೊನಾ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.17:ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇಂದು 5,983 ಜನಕ್ಕೆ ಸೋಂಕು ತಗುಲಿದ್ದು, 138 ಸೋಂಕಿರನ್ನು ಮಾಹಾಮಾರಿ ಬಲಿ ಪಡೆದುಕೊಂಡಿದೆ.

ಇಂದು 10,685 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 1,46,726 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 33,434 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಮತ್ತಷ್ಟು ಇಳಿಕೆಯಾಗಿದ್ದು, ಇಂದು ಶೇ.3.77ರಷ್ಟಿದೆ. ಕೋವೀಡ್-19 ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ.2.30ರಷ್ಟಿದೆ. ಬೆಂಗಳೂರಿನಲ್ಲಿಂದು 1,209 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 17 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 78,943 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಂಕಿಯಲ್ಲಿದೆ.

Also Read  ಕರಾವಳಿಗೆ ರೆಡ್‌ ಅಲರ್ಟ್‌ ➤ ಮುಂದಿನ 3-4 ದಿನ ಭಾರಿ ಮಳೆ ಮುನ್ಸೂಚನೆ!

 

error: Content is protected !!
Scroll to Top