ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.17: ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ಇ-ಸಹಮತಿ ಆ್ಯಪ್ ಸಿದ್ಧಪಡಿಸಿದ್ದು, ಶೀಘ್ರವೇ ಈ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ.

 

ಇ-ಆಡಳಿತ ಇಲಾಖೆ ಎನ್ ಐಸಿ ಮೂಲಕ ಇ-ಸಹಮತಿ ಆ್ಯಪ್(e-Sahamati App) ಸಿದ್ಧಪಡಿಸಲಾಗಿದ್ದು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಮತ್ತು ಖಾಸಗಿ ಕಂಪನಿಗಳ ಜೊತೆಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಊರಿನಲ್ಲಿಯೇ ಆ್ಯಪ್ ಬಳಸಿಕೊಂಡು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.ಇ-ಸಹಮತಿ ಆ್ಯಪ್ ನಲ್ಲಿ ರೈತರು  ಮತ್ತು ಅವರು ಬೆಳೆದ ಬೆಳಗಳ ಸಂಪೂರ್ಣ ಮಾಹಿತಿ ಇರಲಿದ್ದು, ನಿರ್ವಹಣೆಗೆ ಕನ್ವೆಂಟ್ ಮ್ಯಾನೇಜರ್ ಮೂಲಕ ಖಾಸಗಿ ಕಂಪನಿಗಳು ರೈತರನ್ನು ಸಂಪರ್ಕಿಸಬಹುದು.ಬೆಳೆಗಳ ಖರೀದಿಗೆ ಮುಂದೆ ಬರುವ ಕಂಪನಿಗಳು ಕನ್ವೆಂಟ್ ಮ್ಯಾನೇಜರ್ ಸಂಪರ್ಕಿಸಿದರೆ ರೈತರ ಒಪ್ಪಿಗೆ ಪಡೆದು ಕಂಪನಿಗೆ ತಿಳಿಸಿ, ಕಂಪನಿ ರೈತರನ್ನು ಸಂಪರ್ಕಿಸಿ ರೈತರ ಬೆಳೆಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದೆ.

Also Read  ರಸ್ತೆಯಲ್ಲಿ ಸಿಕ್ಕಿದ ಪರ್ಸನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಗೃಹರಕ್ಷಕ ಸಿಬ್ಬಂದಿ

 

error: Content is protected !!
Scroll to Top