ಕನ್ನಡ ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್ ಆರಂಭ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.16: ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಬಿಗ್​ ಬಾಸ್​ 8 ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಗಿತ್ತು. ಈಗ ಇದೇ ಕಾರ್ಯಕ್ರಮವನ್ನು 12 ಮಂದಿ ಸ್ಪರ್ಧಿಗಳೊಂದಿಗೆ ಮತ್ತೆ ಮುಂದುವರೆಸುವ ನಿರ್ಧಾರಕ್ಕೆ ಬಂದಿದೆ ಕಲರ್ಸ್​ ಕನ್ನಡ ವಾಹಿನಿ

 

ಹೌದು ಅರ್ಧಕ್ಕೆ ನಿಂತಿದ್ದ ಕನ್ನಡ ಬಿಗ್​ ಬಾಸ್​ ಸೀಸನ್​ 8 ಇನ್ನೇನು ಆರಂಭವಾಗಲಿದೆ. ಮತ್ತೆ ಕಿಚ್ಚ ಸುದೀಪ್​ ಅವರನ್ನು ಕಿರುತೆರೆ ಮೇಲೆ ನೋಡಬಹುದಾಗಿದೆ.ಕನ್ನಡ ಬಿಗ್​ ಬಾಸ್​ ವೀಕ್ಷಿಸುವ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದನ್ನು ಕೊಟ್ಟಿರುವುದು ಮತ್ತಾರೂ ಅಲ್ಲ ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು. ಪರಮೇಶ್ವರ ಗುಂಡ್ಕಲ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಬಿಗ್​ ಬಾಸ್​ 8 ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್​ ಆರಂಭವಾಗಲಿದೆ ಅಂತ ಸ್ಪಷ್ಟಪಡಿಸಿದ್ದಾರೆ.

Also Read  ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಿಂದ ಮರ ಲೂಟಿ ಪ್ರಕರಣ ➤ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ವಾರದ ಗಡುವು ನೀಡಿದ ನೀತಿ ತಂಡ ➤ ತಪ್ಪಿದ್ದಲ್ಲಿ ಕಡಬ ಠಾಣೆಯ ಮುಂಭಾಗ ಉಗ್ರ ಪ್ರತಿಭಟನೆಯ ಎಚ್ಚರಿಕೆ

error: Content is protected !!
Scroll to Top