ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು…. ಈಗ ಗ್ರೀನ್​ ಫಂಗಸ್​ ಪತ್ತೆ..!

(ನ್ಯೂಸ್ ಕಡಬ) newskadaba,ಇಂದೋರ್ ಜೂ.16:ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮೊದಲಿಗೆ ಬ್ಲ್ಯಾಕ್​ ಫಂಗಸ್ Black Fungus (ಕಪ್ಪು ಶಿಲೀಂಧ್ರ)​ ಕಾಣಿಸಿಕೊಂಡಿತು. ಬಳಿಕ ವೈಟ್ ಫಂಗಸ್ White Fungus ​(ಬಿಳಿ ಶಿಲೀಂಧ್ರ) , ಆನಂತರ ಯೆಲ್ಲೋ ಫಂಗಸ್ Yellow Fungus​(ಹಳದಿ ಶಿಲೀಂಧ್ರ) ಪತ್ತೆಯಾಗಿತ್ತು. ಈಗ ಹೊಸದಾಗಿ ಗ್ರೀನ್ ಫಂಗಸ್ Green Fungus(ಹಸಿರು ಶಿಲೀಂಧ್ರ)​ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ. ಹೌದು, ಮಧ್ಯಪ್ರದೇಶದ ಇಂದೋರ್(Indore)​​ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಗ್ರೀನ್​ ಫಂಗಸ್(Green Fungus)​ ಪತ್ತೆಯಾಗಿರುವುದು ಖಚಿತವಾಗಿದೆ.

 

34 ವರ್ಷದ ಕೋವಿಡ್​(COVID-19) ಗುಣಮುಖ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು, ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ. ಗ್ರೀನ್ ಫಂಗಸ್ ಪತ್ತೆಯಾದ ಕೂಡಲೇ ಆ ವ್ಯಕ್ತಿಯನ್ನು ಏರ್​ ಆ್ಯಂಬುಲೆನ್ಸ್​ ಮೂಲಕ ಮುಂಬೈಗೆ ಶಿಫ್ಟ್​ ಮಾಡಲಾಗಿದೆ ಎಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

Also Read  ತಂದೆಯ ಕನಸಿನಂತೆ ಐಎಎಸ್ ಅಧಿಕಾರಿಯಾದ ಮುದ್ರಾ ಗೈರೋಲಾ

error: Content is protected !!
Scroll to Top