“ರಾಬರ್ಟ್” ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ ➤ ಪ್ರಮುಖ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಸಂಬಂಧ ಮತ್ತೊಬ್ಬ ಕಿಂಗ್ ಪಿನ್ ರಾಜೇಶ್ ಅಲಿಯಾಸ್ ಕರಿಯನನ್ನ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

 

ಮೂರು ತಿಂಗಳ ಹಿಂದೆ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ನಡೆದಿತ್ತು. ಕೊನೆ ಕ್ಷಣದಲ್ಲಿ ಎಚ್ಚೆತ್ತ ಪೊಲೀಸರು, ಆ ಕೊಲೆಗೆ ರೆಡಿಯಾಗಿದ್ದ ಆರೋಪಿಗಳನ್ನು ಮಾರಕಾಸ್ತ್ರಗಳ ಸಮೇತ ಬಂಧಿಸಿದ್ದರು. ಈ ವೇಳೆ ಹಲವರು ಎಸ್ಕೇಪ್ ಕೂಡ ಆಗಿದ್ರು. ಅವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ರಾಜೇಶ್ ಅಲಿಯಾಸ್ ಕರಿಯ ಬಾಂಬೆ ರವಿ ಟೀಂ ನಲ್ಲಿ ಗುರುತಿಸಿಕೊಂಡಿದ್ದು, ಬಾಂಬೆ ರವಿ ಸೂಚನೆ ಯಂತೆ ಉಮಾಪತಿಯನ್ನು ಕೊಲೆ ಮಾಡಲು ತಂಡದೊಂದಿಗೆ ಪ್ಲ್ಯಾನ್ ಮಾಡಿಕೊಂಡಿದ್ದ ಎನ್ನಲಾಗಿದೆ. ಸತತ ಮೂರು ತಿಂಗಳು ಕಾರ್ಯಚರಣೆ ನಡೆಸಿದ ಪೊಲೀಸರು ರಾಜೇಶ್ ಅಲಿಯಾಸ್ ಕರಿಯನ್ನು ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ.

Also Read  ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ➤ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು..!

 

error: Content is protected !!
Scroll to Top