ರಾಜ್ಯದ ಹೊಸ ಕೊರೊನಾ ಕೇಸ್‌ 5 ಸಾವಿರಕ್ಕೆ ಇಳಿಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ರಾಜ್ಯದಲ್ಲಿ ಹೊಸ ಕೊರೊನಾ ಸೋಂಕು ಇಳಿಕೆಯ ಹಾದಿಯಲ್ಲಿದ್ದು ಮಂಗಳವಾರ 5041 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 27,77,010ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 1,32,600 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಪಾಸಿಟಿವಿಟಿ ದರ ಶೇ. 3.80ಗೆ ಕುಸಿದಿದೆ.

ಬೆಂಗಳೂರಿನಲ್ಲಿ ಹೊಸ ಕೇಸ್‌ ಸಂಖ್ಯೆ ಸಾವಿರಕ್ಕಿಂತ ಕೆಳಕ್ಕಿಳಿದಿದ್ದು ಮಂಗಳವಾರ 985 ಪ್ರಕರಣ ಬೆಳಕಿಗೆ ಬಂದಿದೆ. ಹಾಸನದಲ್ಲಿ 522, ಮೈಸೂರಿನಲ್ಲಿ 490, ದಕ್ಷಿಣ ಕನ್ನಡದಲ್ಲಿ 482, ತುಮಕೂರಿನಲ್ಲಿ 329 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದೆಲ್ಲಾ ಜಿಲ್ಲೆಗಳಲ್ಲಿ 300ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿವೆ.

Also Read  ಮಾರುಕಟ್ಟೆ ಮೌಲ್ಯ ದರಪಟ್ಟಿ ಪರಿಷ್ಕರಣೆ

 

 

error: Content is protected !!
Scroll to Top