(ನ್ಯೂಸ್ ಕಡಬ) newskadaba,ಕುಕ್ಕೆ ಸುಬ್ರಹ್ಮಣ್ಯ ಜೂ.15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿದಿರುವ ನಡುವೆಯೇ, ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ನಾಡಿನ ನಂಬರ್ ವನ್ ಮುಜರಾಯಿ ದೇಗುಲವಾದ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿ ಇರುವ ಸುಬ್ರಹ್ಮಣ್ಯ ಪಂಚಾಯಿತಿ ಕೂಡಾ ಸೀಲ್ ಡೌನ್ ಆಗಿದ್ದು, ಇದರ ನಡುವೆಯೇ ರಾಜ್ಯದ ಕೆಲ ಜಿಲ್ಲೆಗಳಿಂದ ಭಕ್ತರು ಸುಬ್ರಹ್ಮಣ್ಯಕ್ಕೆ ಬರುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಏಪ್ರಿಲ್ 28ರಿಂದ ಕುಕ್ಕೆ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಇಡೀ ಪ್ರದೇಶ ಸೀಲ್ ಡೌನ್ ಗೆ ಒಳಗಾಗಿದೆ. ಆದರೂ ಹೊರ ಜಿಲ್ಲೆಗಳ ಭಕ್ತರು ಬರುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.