ಲಾಕ್​ಡೌನ್​ ಸಡಿಲಿಕೆ ಕುರಿತು ಇನ್ನೆರಡು ದಿನಗಳಲ್ಲಿ ಸಿಎಂ ಚರ್ಚೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09: ಕೊರೋನಾ ನಿಯಂತ್ರಣಕ್ಕೆ ಜೂ 14ರವರೆಗೆ ಲಾಕ್​ಡೌನ್​ ವಿಸ್ತರಿಸಿ ಈಗಾಗಲೇ ಸಿಎಂ ಆದೇಶ ನೀಡಿದ್ದರು. ಜೂ. 14 ಬಳಿಕ ರಾಜ್ಯದಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿ, ಹಂತ ಹಂತವಾಗಿ ಅನ್​ಲಾಕ್​ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ.

 

ಈಗಾಗಲೇ ಮೂರು ಬಾರಿ ಲಾಕ್​ಡೌನ್​ ವಿಸ್ತರಿಸಿರುವ ಮುಖ್ಯಮಂತ್ರಿಗಳು ಜೂ 14 ರಬಳಿಕ ಮತ್ತೊಮ್ಮೆ ಲಾಕ್​ಡೌನ್​ ಹೇರುವ ಸಂಭಾವ್ಯ ಕಡಿಮೆ ಇದೆ. ಇದೇ ಹಿನ್ನಲೆ ಯಾವ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಬೇಕು ಎಂಬ ಕುರಿತು ಇನ್ನೆರಡು ದಿನದೊಳಗೆ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಿರ್ಬಂಧಗಳ ತೆರವು ಕುರಿತು ಹಾಗೂ ಕೊರೋನಾ ಸೋಂಕು ಇಳಿಕೆಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Also Read  ದ.ಕ.ಲಾಕ್‌ಡೌನ್ ಸಿಎಂ ಜತೆ ಚರ್ಚಿಸಿ ತೀರ್ಮಾನ ➤ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಪಷ್ಟನೆ

 

error: Content is protected !!
Scroll to Top