ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು.!

(ನ್ಯೂಸ್ ಕಡಬ) newskadaba,ನವದೆಹಲಿ ಜೂ.09: ಲಸಿಕೆ ಹಾಕಿಸಿಕೊಂಡ ವರ ಬೇಕಾಗಿದ್ದಾನೆ ಎಂಬ ವಧುವಿನ ಡಿಮ್ಯಾಂಡ್ ನೋಡಿ ಕಾಂಗ್ರೆಸ್ ಸಂಸದ ಶಶಿ ತರೂರ್ ತಬ್ಬಿಬ್ಬಾಗಿ ಟ್ವೀಟ್ ಮಾಡಿದ್ದಾರೆ.

 

ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಅನ್ನು ಹಾಕಿಸಿಕೊಂಡಿರುವ ವರನನ್ನು ಯುವತಿ ಹುಡುಕುತ್ತಿದ್ದಾಳಂತೆ. ಜೂನ್ 4, 2021 ರಂದು ಪತ್ರಿಕೆಯೊಂದರ ವೈವಾಹಿಕ ಅಂಕಣದಲ್ಲಿ ಕಾಣಿಸಿಕೊಂಡಂತೆ ಇರುವ ಈ ಜಾಹೀರಾತಿನಲ್ಲಿ ಸ್ವಯಂ ಉದ್ಯೋಗಿ ರೋಮನ್ ಕ್ಯಾಥೊಲಿಕ್ ಮಹಿಳೆ ತನ್ನ ಧರ್ಮದ ವ್ಯಕ್ತಿಯೊಂದಿಗೆ ವಿವಾಹವಾಗಲು ಬಯಸಿದ್ದಾಳೆ. ಆದರೆ, ಷರತ್ತು ಮಾತ್ರ ವಿಭಿನ್ನವಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್‍ಗಳನ್ನು ತಾನು ಹಾಕಿಸಿಕೊಂಡಿದ್ದೇನೆ. ಅದೇ ರೀತಿ, ತನ್ನನ್ನು ಮದುವೆಯಾಗುವ ಹುಡುಗ ಸಹ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿರುವುದು ವೈರಲ್ ಆಗುತ್ತಿದೆ.ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

Also Read  ಭೂಗತ ಪಾತಕಿ ಟಿಲ್ಲು ತಾಜ್ಪುರಿಯಾನನ್ನು ಹತ್ಯೆಗೈದ ನಾಲ್ವರು ಕೈದಿಗಳು..!

 

error: Content is protected !!
Scroll to Top