ತೆರಿಗೆ ಕಟ್ಟಲು ಆಗ್ತಿಲ್ಲ ➤ ಅಳಲು ತೋಡಿಕೊಂಡ ಬಾಲಿವುಡ್ ನಟಿ ಕಂಗನಾ

(ನ್ಯೂಸ್ ಕಡಬ) newskadaba,ಮುಂಬೈ ಜೂ.09: ಬಾಲಿವುಡ್ ನಟಿ ಕಂಗನಾ ರಣಾವತ್‍ರವರು ತೆರಿಗೆ ಕಟ್ಟಲು ಆಗುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

 

ಕೊರೊನಾ ವೈರಸ್ ತಡೆಗಟ್ಟಲು ಬಹುತೇಕ ರಾಜ್ಯಗಳಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಲಾಕ್‍ಡೌನ್ ಕೇವಲ ಜನ ಸಾಮಾನ್ಯರ ಮೇಲಷ್ಟೇ ಅಲ್ಲದೆ ಸೆಲೆಬ್ರೆಟಿಗಳ ಜೀವನದ ಮೇಲೂ ಹೊಡೆತ ಬಿದ್ದಿದೆ. ಅನೇಕ ಕಲಾವಿರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಒಂದು ಸಿನಿಮಾಗೆ ಏನಿಲ್ಲ ಅಂದರೂ ಕೋಟ್ಯಂತರ ರೂ. ಸಂಭಾವನೆ ಪಡೆಯುತ್ತಾರೆ ಕಂಗನಾ.ಈ ಕುರಿತಂತೆ ನಟಿ ಕಂಗನಾ ರಣಾವತ್‍ರವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ನನ್ನ ಒಟ್ಟು ಆದಾಯದಲ್ಲಿ ಶೇ. 45ರಷ್ಟು ತೆರಿಗೆ ಪಾವತಿಸುತ್ತೇನೆ. ನಾನು ಅತೀ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದೇನೆ. ಆದರೆ ಕೆಲಸ ಇಲ್ಲದೆ, ಕಳೆದ ವರ್ಷ ಅರ್ಧದಷ್ಟು ತೆರಿಗೆಯನ್ನು ಪಾವತಿಸಿದ್ದೇನೆ. ಇದೀಗ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Also Read  ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಮೆಟ್ಟಿಲೇರಿದ ಬಿಜೆಪಿ

 

 

error: Content is protected !!
Scroll to Top