ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ರಾಜ್ಯದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಕೆಯಾದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊಪ್ಪಳ ಮೂಲದ 2 ವರ್ಷದ ಮಗು ಸೇರಿ 340 ಮಂದಿ ಸಾವನ್ನಪ್ಪಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಸೋಮವಾರ 11,958 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,07,481ಕ್ಕೆ ತಲುಪಿದೆ. ರಾಜ್ಯದಲ್ಲಿ 0-9 ವರ್ಷದ 81,520 ಮಕ್ಕಳಿಕೆ ಸೋಂಕು ತಗುಲಿದ್ದು, 10-19 ವರ್ಷದ 2,03,526 ಮಕ್ಕಳಿಗೆ ಸೋಂಕು ತಗುಲಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಅಲ್ಲದೆ, 0-9 ವರ್ಷದ 60 ಮಕ್ಕಳು, 10-19 ವರ್ಷದ 83 ಮಕ್ಕಳು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.

Also Read  ಮಲ್ಪೆ, ಉಡುಪಿ, ಮಣಿಪಾಲ್ ಗೆ 130 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ

 

 

error: Content is protected !!
Scroll to Top