ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ➤ 5 ಭಾಷೆಗಳಲ್ಲಿ 777 ಚಾರ್ಲಿ ಸಿನಿಮಾ ಟೀಸರ್ ರಿಲೀಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.06:’ಕಿರಿಕ್ ಪಾರ್ಟಿ’ ಹೀರೋ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕನಾಗಿಯೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರಕ್ಷಿತ್ ಶೆಟ್ಟಿ ಬರ್ತ್​ಡೇಗೆ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘777 ಚಾರ್ಲಿ.

ಚಿತ್ರತಂಡ ಸರ್​ಪ್ರೈಸ್ ಒಂದನ್ನು ನೀಡಿದೆ. ರಕ್ಷಿತ್ ಶೆಟ್ಟಿ ನಾಯಕನಾಗಿರುವ 777 ಚಾರ್ಲಿ ಎಂಬ ಮುದ್ದಾದ ನಾಯಿಯ ಕತೆಯಿರುವ ‘777 ಚಾರ್ಲಿ’ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ.ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ‘777 ಚಾರ್ಲಿ ‘ ಸಿನಿಮಾದ ಟೀಸರ್ ಅನ್ನು ಐದೂ ಭಾಷೆಗಳಲ್ಲಿ ಇಂದು ರಿಲೀಸ್ ಮಾಡಲಾಗಿದೆ. ಮುದ್ದಾದ ನಾಯಿಯ ಕತೆಯನ್ನು ಒಳಗೊಂಡಿರುವ ಈ ‘777 ಚಾರ್ಲಿ’ ಸಿನಿಮಾದ ಟೀಸರ್​ಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ.

error: Content is protected !!

Join the Group

Join WhatsApp Group