ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಅ.25. ಸೇವೆ ಎನ್ನುವುದು ಜೀವನದಲ್ಲಿ ಮುಖ್ಯವಾದುದು. ಅದರಲ್ಲೂ ಉತ್ತಮ ಸೇವೆ ಎನ್ನುವುದು ಎಲ್ಲದಕ್ಕಿಂತ ಮುಖ್ಯವಾಗುತ್ತದೆ. ಅಂತಹ ಉತ್ತಮ ಸಮಾಜ ಸೇವೆಯಿಂದಾಗಿ ಇಂದು ವೀರೇಂದ್ರ ಹೆಗ್ಗಡೆಯವರನ್ನು ಎಲ್ಲೆಡೆ ಗುರುತಿಸುವಂತಾಗಿದೆ ಎಂದು ಮೈಸೂರು ಅರಮನೆಯ ಮಹಾರಾಜರಾದ ಯದುವೀರದತ್ತ ಒಡೆಯರ್‌ ಅವರು ಹೇಳಿದರು.

ಅವರು ಮಂಗಳವಾರ ರಾತ್ರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು. ಶುಚಿತ್ವದಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಗಳಿಸಿರುವ ಧರ್ಮಸ್ಥಳದ ಜತೆ ಸ್ವಚ್ಛ ನಗರಿ ಮೈಸೂರಿಗೂ ಆತ್ಮೀಯ ನಂಟಿದ್ದು, ಈ ಸಂಬಂಧ ಇಂದಿಗೂ ಮುಂದುವರಿದಿದೆ ಎಂದರು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮಹತ್ವದಿಂದಾಗಿ ರಾಷ್ಟ್ರದಲ್ಲೆಡೆ ಇಂದು ಗುರುತಿಸುವಂತಾಗಿದೆ. ನನ್ನಿಂದಾಗಿ ಆದದ್ದು ಯಾವುದೂ ಇಲ್ಲ. ಇಲ್ಲಿನ ಸತ್ವ ನನ್ನಿಂದ ಅನೇಕ ಕೆಲಸಗಳನ್ನು ಮಾಡಿಸಿದೆ ಎಂದರು. ಅರಣ್ಯ ಸಚಿವ ಬಿ. ರಮಾನಾಥ ರೈ ಮಾತನಾಡಿ, ಹೆಗ್ಗಡೆಯವರ ತ್ಯಾಗದ ಕುರಿತು ಎಲ್ಲೆಡೆ ಮೆಚ್ಚುಗೆಯಿದೆ. ಧಾರ್ಮಿಕ ನೆಲೆಗಟ್ಟಿನ ಅಡಿಯಲ್ಲಿ ಧರ್ಮಪೀಠದ ನೆಲೆಯಲ್ಲಿ ಎಲ್ಲ ಜಾತಿ ಧರ್ಮದವರ ಪ್ರೀತಿಗೆ ಪಾತ್ರ ರಾದವರು ಹೆಗ್ಗಡೆಯವರು ಎಂದು ಹೇಳಿದರು.

Also Read  ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ

ಈ ಸಂದರ್ಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರಿಗೆ ಸುಜ್ಞಾನಪ್ರಭಾ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಕ್ಷೇತ್ರದಲ್ಲಿ ಸುದೀರ್ಘ‌ ಅವಧಿ ಸೇವೆ ಸಲ್ಲಿಸಿದ ಮಣೆಗಾರ್‌ ಅನಂತ ಪದ್ಮನಾಭ ಭಟ್‌, ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಜಮಾ ಉಗ್ರಾಣ ಮುತ್ಸದ್ದಿ ಬಿ. ಭುಜಬಲಿ, ಹೆಗ್ಗಡೆಯವರ ಕಾರ್ಯದರ್ಶಿ ಕೃಷ್ಣ ಸಿಂಗ್‌, ಕಟ್ಟಡ ವಿಭಾಗದ ಗೋಪಾಲ್‌ ಮೆನನ್‌, ಚಾಲಕ ಧನಕೀರ್ತಿ ಶೆಟ್ಟಿ, ಚಾಲಕ ದಿವಾಕರ ಪ್ರಭು ಅವರನ್ನು ಕ್ಷೇತ್ರದ ಪರವಾಗಿ ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಸ್ವಾಮೀಜಿ, ಮಾಜಿ ಸಚಿವ, ಶಾಸಕ ಅಭಯಚಂದ್ರ  ಜೈನ್‌, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಾ| ನಿರಂಜನ್‌ ಕುಮಾರ್‌, ಪದ್ಮಲತಾ, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ರಾಜೇಂದ್ರ ಕುಮಾರ್‌, ನೀತಾ ಆರ್‌. ಕುಮಾರ್‌, ಅಮಿತ್‌ ಕುಮಾರ್‌, ಶ್ರದ್ಧಾ ಅಮಿತ್‌ ಕುಮಾರ್‌, ಶ್ರೇಯಸ್‌ ಕುಮಾರ್‌, ನಿಶ್ಚಲ್‌ ಕುಮಾರ್‌ ಉಪಸ್ಥಿತರಿದ್ದರು.

Also Read  ಡಿ. 10ರಿಂದ 15ರವರೆಗೆ ಆಳ್ವಾಸ್ ವಿರಾಸತ್- 2024

ಲಕ್ಷ್ಮೀನಾರಾಯಣ ರಾವ್‌, ಎ.ವಿ. ಶೆಟ್ಟಿ ಅವರು ಸನ್ಮಾನ ಪತ್ರ ವಾಚಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಹಾಗೂ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಸ್ವಾಗತಿಸಿದರು. ಉಪನ್ಯಾಸಕಿ ಶ್ರುತಿ ಜೈನ್‌ ರೆಂಜಾಳ, ಶಿಕ್ಷಕ ರಾಮಚಂದ್ರ ರಾವ್‌ ನಿರ್ವಹಿಸಿದರು. ಶುಭಚಂದ್ರರಾಜ್‌ ವಂದಿಸಿದರು.

error: Content is protected !!
Scroll to Top