ಪಿಲಿಕುಲದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ “ಹುಲಿ ರಾಣಿ”

(ನ್ಯೂಸ್ ಕಡಬ) newskadaba,ಮಂಗಳೂರು ಜೂ.06: ಪಿಲಿಕುಲದಲ್ಲಿರುವ 10 ವರ್ಷದ ಹುಲಿ ರಾಣಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಆರೋಗ್ಯವಾಗಿರುವ ಈ ಮೂರು ಮರಿಗಳು ಇನ್ನೂ 16 ದಿನಗಳಲ್ಲಿ ಕಣ್ಣು ತೆರೆಯುತ್ತವೆ. 2019 ರಲ್ಲಿ ರಾಣಿ ಹುಲಿ 5 ಮರಿಗಳಿಗೆ ಜನ್ಮ ನೀಡಿತ್ತು. ಇದೀಗ ಪಿಲಿಕುಲದಲ್ಲಿ ಹುಲಿಗಳ ಸಂಖ್ಯೆ 13 ಕ್ಕೇ ಏರಿಕೆಯಾಗಿದೆ.

ಹಾಗೂ ಪಿಲಿಕುಲದಲ್ಲಿರುವ ಕಾಡುಶ್ವಾನ ಧೋಳ್ ಕೂಡ ಇತ್ತೀಚೆಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕಾಡುಶ್ವಾನ 5 ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಲದಲ್ಲಿ ಕಾಡುಶ್ವಾನಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.ಉಷ್ಟ್ರಪಕ್ಷಿ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನ್ನಿಟ್ಟಿದ್ದು ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದೆ. ಇದರಲ್ಲಿ ಒಂದು ಮರಿ ಜನ್ಮತಾಳಿದೆ.

Also Read  ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೂ ಕೋವಿಡ್ ದೃಢ

 

error: Content is protected !!
Scroll to Top