ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba, ಮೈಸೂರು ಜೂ.06: ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯ ಆಗಮನವಾಗಿದೆ. ಡಾ. ಬಗಾದಿ ಗೌತಮ್ ಅವರು ಇಂದು ಇಲ್ಲಿನ ಡಿಸಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು.

 

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸರ್ವೀಸ್‌ನಲ್ಲಿ ಯಾವ ವಿವಾದಕ್ಕೂ ಆಸ್ಪದ ನೀಡಿಲ್ಲ. ನನ್ನ ಹೆಸರು ನೀವು ಕೇಳಿದ್ದಿರೋ ಇಲ್ಲವೋ ಗೊತ್ತಿಲ್ಲ. ನಾನು ತುಂಬಾ ಲೋ ಪ್ರೊಫೈಲ್ ಅಧಿಕಾರಿ. ಸಾಂಪ್ರದಾಯಿಕ ನಗರಿ ಮೈಸೂರಿನಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಬಹುದು. ನಾನು ಪಾರದರ್ಶಕವಾಗಿ ಜನರಿಗೆ ಹತ್ತಿರವಾಗಿ ಆಡಳಿತ ಕೊಡಬೇಕು ಎಂದು ಭರವಸೆ ಕೊಡುತ್ತೇನೆ ಎಂದರು.

Also Read  ಸೂರ್ಯಗ್ರಹಣದ ಹಿನ್ನಲೆ ➤ ಉಡುಪಿ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಜ್..!!

error: Content is protected !!
Scroll to Top