ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ ► ಅಪಾಯದಿಂದ ಪಾರು..!!!

(ನ್ಯೂಸ್ ಕಡಬ) newskadaba.com ಮುಂಬೈ, ಅ.25. ನಗರದ ಬಾಂದ್ರಾದಲ್ಲಿ ವಾಸವಾಗಿರುವ ಐಶ್ವರ್ಯ ರೈ ತಾಯಿ ಮನೆ ಲಾ ಮರ್ ಬಿಲ್ಡಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಮೂಲಗಳ ಪ್ರಕಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಷಯ ತಿಳಿದ ಕೂಡಲೇ ಅಭಿಷೇಕ್ ಜೊತೆ ಐಶ್ವರ್ಯ ರೈ ತನ್ನ ತಾಯಿ ವೃಂದಾ ರೈ ಮನೆಗೆ ಭೇಟಿ ನೀಡಿ, ತಾಯಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ನೆರೆಹೊರೆಯವರು ಮತ್ತು ಹಿತೈಷಿಗಳು ತೋರಿಸಿದ ಕಾಳಜಿಗೆ  ಐಶ್ವರ್ಯ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

Also Read  ಮಸೀದಿಯ ಕಾಣಿಕೆ ಹುಂಡಿ ಬೆಂಕಿಗಾಹುತಿ ➤ ಅಪಾರ ಪ್ರಮಾಣದ ನೋಟು ಸುಟ್ಟು ಕರಕಲು

 

error: Content is protected !!
Scroll to Top