(ನ್ಯೂಸ್ ಕಡಬ) newskadaba,ವಿಟ್ಲ,ಜೂ.02: ಕೋವಿಡ್ ನಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನಡೆಸುತ್ತಿರುವಾಗ ಆರೋಗ್ಯ ವ್ಯತ್ಯಯವಾಗಿ ಮಗನೂ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ನಡೆದಿದೆ.ಪುಣಚ ಗ್ರಾಮದ ನಿವಾಸಿ ಪ್ರೊಪೆಸರ್ ಭುಜಂಗ ಶೆಟ್ಟಿ ಹಾಗೂ ಅವರ ಶೈಲೇಶ್ ಒಂದೇ ದಿನ ಅನಾರೋಗ್ಯ ತುತ್ತಾಗಿ ಮೃತ ಪಟ್ಟವರು.
ತಂದೆಯ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ಕೋವಿಡ್ ನಿಯಾಮಾವಳಿಯಂತೆ ನಡೆಯುತ್ತಿತ್ತು.ಈ ಸಂದರ್ಭ ಪುತ್ರ ಶೈಲೇಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.